Publish Date: Wed, 12 Apr 2023 (20:35 IST)
Updated Date: Wed, 12 Apr 2023 (19:51 IST)
ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ ಪರಮೇಶ್ವರ್ ಕಾಂಗ್ರೆಸ್ ಪ್ರಣಾಳಿಕೆ ಟ್ರೇಲರ್ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು ನಾಲ್ಕು ತಿಂಗಳ ಹಿಂದೆ ನಮಗೆ ಜವಾಬ್ದಾರಿ ಕೊಟ್ಟಿದ್ರು ಕಚೇರಿಯಲ್ಲಿ ಪ್ರಣಾಳಿಕೆ ತಯಾರಿ ಆಗಬಾರದು.ಜನರ ಸಮಸ್ಯೆ, ಜಲ್ವಂತ್ ಸಮಸ್ಯೆಗಳು ಇದ್ದಾವೆ. ಇವುಗಳನ್ನು ಜನರ ಅಭಿಪ್ರಾಯ ಹಾಗೂ ಸಲಹೆ ಪಡೆದಿದ್ದೇವೆ.ಲಕ್ಷಾಂತರ ಜನರ ಜೊತೆ ಚರ್ಚೆ ಮಾಡಿದ್ದೇವೆ.ನೌಕರರ ವರ್ಗದ ಜೊತೆ ಚರ್ಚೆ ಮಾಡಿದ್ದೇವೆ.ಎಫ್ ಕೆ ಸಿಸಿ ಅವರ ಜೊತೆ ಸುಧೀರ್ಘವಾಗಿ ಚರ್ಚೆ ಮಾಡಿದ್ದೇವೆ.ಜಿಲ್ಲಾವಾರು ಅಧಿಕಾರಿಗಳ ಕರೆದು ಚರ್ಚೆ ಮಾಡಿದ್ವಿ.ಜನರ ದೃಷ್ಟಿಯಿಂದ ಸಲಹೆ ಕೊಟ್ಟಿದ್ದಾರೆ.ಆಟೋ ಚಾಲಕರು,ಬೀದಿ ಬದಿ ವ್ಯಾಪಾರಿಗಳು ಕಾರ್ಮಿಕರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ.ಒಳ್ಳೆಯ ಆಡಳಿತ ಬೇಕು ಎಂಬ ಚರ್ಚೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.