ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ "ಸ್ವಚ್ಛ ಬೆಂಗಳೂರು/ಘನತ್ಯಾಜ್ಯ ನಿರ್ವಹಣೆ" ಗೆ ಸಂಬಂಧಿಸಿದಂತೆ ಇಂದು ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಸೆನೆಟ್ ಹಾಲ್ ನಲ್ಲಿ ವಿಚಾರ ಸಂಕಿರಣ ಹಮ್ಮಿ ಕೊಳ್ಳಲಾಗಿತ್ತು. ಬ್ರ್ಯಾಂವಡ್ ಬೆಂಗಳೂರಿನ ಸಲುವಾಗಿ 7 ವಿಭಾಗಗಳಲ್ಲಿ ಬಂದಿರುವಂತ ಸಾರ್ವಜನಿಕರ ಸಲಹೆಗಳನ್ನು ಈಗಾಗಲೇ ವಿಂಗಡಿಸಿದ್ದು, ಸ್ವಚ್ಚ ಬೆಂಗಳೂರು ವಿಭಾಗದ ಬಗ್ಗೆ 10,479 ಸಲಹೆಗಳು ಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಪರಿಸರ ವಿಜ್ಞಾನ ವಿಭಾಗದದಿಂದ ಬಂದಿರುವಂತಹ ಎಲ್ಲಾ ಸಲಹೆಗಳನ್ನು ಬೇರ್ಪಡಿಸಿ ವರದಿಯನ್ನು ಸಿದ್ದಪಡಿಸುತ್ತೆವೆ. ನಾಗರಿಕರಿಂದ ಬಂದಿರುವಂತಹ ಸಲಹೆಗಳ ಸಂಬಂಧ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರಕಾಶ್ ರವರು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಇಂದು ನಡೆದಂತಹ ವಿಚಾರ ಸಂಕಿರಣದಲ್ಲಿ ಬಂದತಹ ಸಲಹೆಗಳು ಹಾಗೂ ನಾಗರಿಕರಿಂದ ಬಂದಿರುವ ಎಲ್ಲಾ ಸಲಹೆಗಳನ್ನು ಕ್ರೋಢೀಕರಿಸಿ ಅಧ್ಯಯನ ನಡೆಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.ಎಂದು ವ್ಯವಸ್ಥಾಪಕ ನಿರ್ದೇಶಕರು ಸಿ ಜೆ ಎಂ ಬಸವರಾಜ ಕಾಬಡೆ ತಿಳಿಸಿದ್ದಾರೆ.