ಇಂದು ಬೆಳಗಾವಿಯಲ್ಲಿ ಎರಡನೇ ದಿನದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಸರ್ಕಾರ ವಿರುದ್ಧ ಸಮರಕ್ಕೆ ಬಿಜೆಪಿ, ಜೆಡಿಎಸ್ ತಯಾರಿ ನಡೆಸಿವೆ.. ಈಗಾಗಲೇ ಬರದ ಕುರಿತು ಚರ್ಚೆಗೆ ವಿಪಕ್ಷಗಳು ನಿಲುವಳಿ ಸೂಚನೆ ಮಂಡನೆ ಮಾಡಿವೆ.
ಈ ಬಗ್ಗೆ ಚರ್ಚೆಗೆ ವಿಧಾನ ಸಭಾ ಸ್ಪೀಕರ್ U.T.ಖಾದರ್ ಪೂರ್ವಭಾವಿ ಚರ್ಚೆಗೆ ಅನುಮತಿ ನೀಡಿದ್ದಾರೆ.. ಈ ನಿಟ್ಟಿನಲ್ಲಿ ಇಂದು ಇಡೀ ದಿನ ಬರದ ಬರೆ ಎಳೆಯಲು ವಿರೋಧ ಪಕ್ಷ ರೆಡಿಯಾಗಿದೆ.
ಬರ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ.. ಹೆಸರಿಗಷ್ಟೇ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಕೊಟ್ಟಿಲ್ಲ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಪ್ರಮುಖರು ಪ್ರತ್ಯೇಕ ತಂಡಗಳಲ್ಲಿ ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಮಾಡಿದ್ದು, ಪ್ರವಾಸದ ವೇಳೆ ಸಂಗ್ರಹಿಸಲಾದ ಮಾಹಿತಿಗಳ ಆಧಾರದ ಮೇಲೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.