Publish Date: Wed, 13 Feb 2019 (16:55 IST)
Updated Date: Wed, 13 Feb 2019 (16:57 IST)
ಆಪರೇಷನ್ ಕಮಲದ ಆಡಿಯೋ ಕುರಿತು ವಿಶೇಷ ತನಿಖಾ ದಳದಿಂದಲೇ ತನಿಖೆಯಾಗುವುದು ಪಕ್ಕಾ ಆಗಿದೆ.
ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ರವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಲು ವಿಫಲವಾಗಿಯಿತು. ಹಾಗಾಗಿ ಈ ಹಿಂದೆ ಸಭಾಧ್ಯಕ್ಷರು ರೂಲಿಂಗ್ ನೀಡಿದಂತೆ ವಿಶೇಷ ತನಿಖಾ ದಳದಿಂದಲೇ ಆಡಿಯೋ ಬಗ್ಗೆ ತನಿಖೆ ಆಗುವ ಸಾಧ್ಯತೆ ಹೆಚ್ಚಾಗಿದೆ.
ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಶೇಷ ತನಿಖಾ ದಳದಿಂದ ತನಿಖೆ ಬೇಡ, ಸದನ ಸಮಿತಿ ರಚಿಸಿ ಎಂದು ಬಿಜೆಪಿ ಇಂದಿನ ಸಭೆಯಲ್ಲಿ ಒತ್ತಾಯಿಸಿದ್ದರಾದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯ ಬೇಡಿಕೆಗೆ ಒಪ್ಪದೆ ನಿನ್ನೆ ಸಭಾಧ್ಯಕ್ಷರು ಸೂಚಿಸಿರುವಂತೆ ವಿಶೇಷ ತನಿಖಾ ದಳದಿಂದಲೇ ತನಿಖೆ ಆಗಲಿ ಎಂಬ ನಿಲುವು ತಾಳಿದ್ದರಿಂದ ಸಭಾಧ್ಯಕ್ಷರ ನೇತೃತ್ವದ ಸಭೆ ವಿಫಲವಾಯಿತು.