ಮಂಡ್ಯ : ಪ್ರಸ್ತುತ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಡಿಜಿಟಲ್ ಮಯ.
ಚಿಲ್ಲರೆ ಅಂಗಡಿ ಹೋಗಿ ಜನರು ಒಂದು ರೂಪಾಯಿ ನೀಡಬೇಕೆಂದರೂ ತಮ್ಮ ಮೊಬೈಲ್ನಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಯಂ ಅಥವಾ ಇನ್ಯಾವುದೋ ಆಪ್ ಮೂಲಕ ಆನ್ಲೈನ್ ಟ್ರಾನ್ಸ್ ಫರ್ ಮಾಡುತ್ತಾರೆ.
ಇದೀಗ ಈ ಡಿಜಿಟಲ್ ಯುಗ ದೇವಸ್ಥಾನಗಳಿಗೂ ಸಹ ವ್ಯಾಪಿಸುತ್ತಿದೆ. ಮಂಡ್ಯದ ದೇವಸ್ಥಾನವೊಂದರಲ್ಲಿ ಹುಂಡಿಗೆ ಹಣ ಹಾಕಬೇಕಂದ್ರೆ ಕ್ಯೂಆರ್ ಕೋಡ್ ಬಳಸಿಕೊಂಡು ಆನ್ಲೈನ್ ಮೂಲಕ ಕಳಿಸಬಹುದಾಗಿದೆ.
ಜನರು ದೇವಸ್ಥಾನ ಹುಂಡಿಗೆ ಹಣ ಹಾಕುವ ಮೊದಲು ಈ ಹಣ ದೇವರ ಸೇವೆಗೆ ಹೋಗುತ್ತಾ, ಇಲ್ಲ ಅರ್ಚಕರಿಗೆ ಹೋಗುತ್ತೋ ಎಂಬ ಅನುಮಾನಗಳು ತಲೆಯಲ್ಲಿ ಬರುತ್ತವೆ. ಹುಂಡಿ ಹಣ ಎಣಿಕೆ ವೇಳೆ ಸಮಸ್ಯೆಗಳು ಇರುತ್ತವೆ.