Publish Date: Mon, 27 Dec 2021 (19:35 IST)
Updated Date: Mon, 27 Dec 2021 (19:40 IST)
ಬೆಂಗಳೂರು ನಗರದ ಪೀಣ್ಯ ಫ್ಲೈ ಓವರ್ ನಲ್ಲಿ ಪಿಲ್ಲರ್ 102 ಮತ್ತು 103, 8 ನೇ ಮೈಲಿ ಬಳಿ ಕೇಬಲ್ ದುರಸ್ತಿ ಕೆಲಸದ ಹಿನ್ನೆಲೆ ಒಂದು ವಾರ ರಸ್ತೆ ಬಂದ್ ಆಗಿರಲಿದೆ.
ಈ ಹಿನ್ನೆಲೆ ವಾಹನ ಸವಾರರು ಬದಲಿ ಮಾರ್ಗವನ್ನು ಅನುಸರಿಸಬೇಕಾಗಿದೆ.
ಇಂದಿನಿಂದ ಡಿಸೆಂಬರ್ 31ರ ವರೆಗೆ ಫ್ಲೈ ಓವರ್ ಬಂದ್ ಆಗಿರಲಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಿಂದ ತುಮಕೂರಿನ ಕಡೆ ಸಂಚರಿಸುವವರು ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್ ಬಳಿ ಎಡಕ್ಕೆ ತಿರುಗಿ ಸುಮನಹಳ್ಳಿ, ಮಾಗಡಿ ರಸ್ತೆ ಮೂಲಕ ನೈಸ್ ರಸ್ತೆಯಿಂದ ಹೊರ ಹೋಗಲು ಸೂಚನೆ ನೀಡಲಾಗಿದ್ದು, ತುಮಕೂರು ಕಡೆಯಿಂದ ಬರುವವರು ಮಾದಾವಾರ ಬಳಿ ಬಲಕ್ಕೆ ತಿರುಗಿ ನೈಸ್ ರೋಡ್ ಮೂಲಕ ಬೆಂಗಳೂರು ನಗರ ಪ್ರವೇಶಕ್ಕೆ ಸೂಚನೆ ಕೊಡಲಾಗಿದೆ.