ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ರಾಜಧಾನಿಯ ಜನರೂ ಕೂಡ ಇನ್ನೂ 10 ದಿನಗಳ ಕಾಲ ಎಚ್ಚರವಾಗಿರಬೇಕಾಗಿದೆ. ಏಕೆಂದರೆ ಇನ್ನೂ ಹತ್ತು ದಿನಗಳ ಕಾಲ ಮಳೆಯ ಗಂಡಾಂತರ ದಕ್ಷಿಣ ಒಳನಾಡಿಗೆ ಕಾದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಈಗಾಗಲೇ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಮತ್ತೆ ನವೆಂಬರ್ 26 ರಿಂದ ಮೂರು ದಿನ ವಾಯುಭಾರ ಕುಸಿತವಾಗುವ ಸಾಧ್ಯತೆ ಇದ್ದು ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಸರಿ ಸುಮಾರು ಡಿಸೆಂಬರ್ ಮೊದಲ ವಾರದವರೆಗೂ ಮಳೆ ಕಾಟ ಮುಂದುವರೆಯುವುದು ಗ್ಯಾರೆಂಟಿಯಾಗಿದೆ. ವಾಯುಭಾರ ಕುಸಿತದಿಂದ ಕರ್ನಾಟಕ್ಕಂತೂ ಭಾರಿ ಗಂಡಾಂತರ ತರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.