ಆ ದೇವಸ್ಥಾನದಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಸಾವಿರಾರು ಜನರು ಬಂದು ದರ್ಶನ ಪಡೆದುಕೊಳ್ಳಬೇಕಿತ್ತು. ಆದರೆ ಮಹಾ ಮಳೆಯಿಂದಾಗಿ ದಕ್ಷಿಣ ಕಾಶಿ ಖ್ಯಾತಿಯ ದೇವಾಲಯಕ್ಕೆ ಬರೋ ಜನರು ನಿರಾಸೆ ಅನುಭವಿಸುವಂತಾಗಿದೆ.
ಯಡೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ಕೃಷ್ಣಾ ನದಿ ನೀರು ನುಗ್ಗಿರೋದು ಭಕ್ತರ ನಿರಾಸೆಗೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ದಕ್ಷಿಣದ ಕಾಶಿ ಅಂತಲೇ ಖ್ಯಾತಿ ಇರುವ ದೇವಸ್ಥಾನ
ಶ್ರೀ ಕಾಡ ಸಿದ್ದೇಶ್ವರ ಸಂಸ್ಥಾನದ ಮಠದ ದೇವಸ್ಥಾನ ಇಲ್ಲಿದೆ.
ಶ್ರಾವಣ ಮಾಸ ಹಿನ್ನಲೆ ಆಗಮಿಸುವ ಸಾವಿರಾರು ಭಕ್ತರಿಗೆ ದೇವಾಲಕ್ಕೆ ನೀರು ನುಗ್ಗಿರೋದ್ರಿಂದ ನಿರಾಸೆಯಾಗಿದೆ.
ದೇವರ ದರ್ಶನ ಬಂದ್ ಆಗುವ ಸಾಧ್ಯತೆ ಕಂಡು ಬಂದಿದ್ದು, ಸಹಸ್ರಾರು ಜನರು ದೇವರ ದರ್ಶನವಿಲ್ಲದೇ ಮರಳುವಂತಾಗಿದೆ.