Publish Date: Wednesday, 03 February 2021 (09:36 IST)
Updated Date: Wednesday, 03 February 2021 (09:38 IST)
ಮುಂಬೈ : 84 ವರ್ಷದ ವೃದ್ಧನೊಬ್ಬ ತನ್ನ ಪತ್ನಿಯನ್ನು ಕೊಂದು ಮನೆಯೊಳಗೆ ಬೆಂಕಿ ಹಾಕಿ ಸುಟ್ಟ ಘಟನೆ ಮಹಾರಾಷ್ಟ್ರದ ಡೊಂಬಿವಾಲಿಯಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಪತಿ ಪತ್ನಿಯರ ನಡುವೆ ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ವೃದ್ಧ ಪತ್ನಿಗೆ ಚಾಕುವಿನಿಂದ ಇರಿದು ಕೊಂದು ಶವವನ್ನು ಬೆಂಕಿ ಹಾಕಿ ಸುಟ್ಟಿದ್ದಾನೆ. ಮನೆಯಲ್ಲಿ ಹೊಗೆಯಾಡುವುದನ್ನು ನೋಡಿದ ಮಗ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಅಷ್ಟರಲ್ಲೇ ವೃದ್ಧ ಪರಾರಿಯಾಗಿದ್ದಾನೆ.ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವೃದ್ಧನನ್ನು ಬಂಧಿಸಿದ್ದಾರೆ.