Publish Date: Sunday, 31 January 2021 (11:32 IST)
Updated Date: Sunday, 31 January 2021 (11:38 IST)
ಮುಂಬೈ : 13 ವರ್ಷದ ಹುಡುಗಿಗೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ವ್ಯಕ್ತಿ ಮುಂಬೈ ಗೆ ಕರೆದುಕೊಂಡು ಹೋಗಿ ತನ್ನ ಅಪ್ರಾಪ್ತ ಸ್ನೇಹಿತನ ಜೊತೆ ಸೇರಿ ಸಾಮೂಹಿಕ ಮಾನಭಂಗ ಎಸಗಿದ ಘಟನೆ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಂತ್ರಸ್ತೆಗೆ 21 ವರ್ಷದ ಯುವಕ ಸ್ನೇಹಿತನಾಗಿದ್ದಾನೆ. ಇಬ್ಬರು ಸೇರಿ ಮನೆಬಿಟ್ಟು ಮುಂಬೈ ಗೆ ಪಲಾಯನ ಮಾಡಿದ್ದಾರೆ. ಅಲ್ಲಿ ತನ್ನ ಸ್ನೇಹಿತನ ಜೊತೆ ಸೇರಿ ಇಂತಹ ಘೋರ ಕೃತ್ಯ ಎಸಗಿದ್ದಾನೆ.
ಇತ್ತ ಹುಡುಗಿಯ ಮನೆಯವರು ಪೊಲೀಸರಿಗೆ ನಾಪತ್ತೆಯಾದ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಗಿಯನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.