Publish Date: Sun, 26 Feb 2023 (11:34 IST)
Updated Date: Sun, 26 Feb 2023 (11:36 IST)
ವಿಜಯಪುರ : ತಡರಾತ್ರಿ ಗುಡಿಸಲಿಗೆ ಬೆಂಕಿ ಹತ್ತಿ ವೃದ್ಧ ದಂಪತಿ ಸಜೀವ ದಹನವಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ನಿವರಗಿ ರಸ್ತೆಯ ತೋಟದ ಮನೆಯಲ್ಲಿ ದುರ್ಘಟನೆ ನಡೆದಿದೆ. ಕರೀಂಸಾಬ್ ಟಪಾಲ್ (82), ಸಾಜನಬಿ ಟಪಾಲ್ (72) ಸಜೀವ ದಹನವಾಗಿದ್ದಾರೆ. ತಡರಾತ್ರಿ ಗುಡಿಸಲಿಗೆ ಆಕಸ್ಮಿಕ ಬೆಂಕಿ ಹತ್ತಿ ಈ ದುರ್ಘಟನೆ ನಡೆದಿದೆ.