Publish Date: Fri, 17 Feb 2023 (12:28 IST)
Updated Date: Fri, 17 Feb 2023 (13:08 IST)
ವಿಜಯಪುರ : ಜಿಲ್ಲೆಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಜಿಲ್ಲೆಯ ತಿಕೋಟ ತಾಲೂಕಿನಲ್ಲಿ ಭೂಕಂಪದ ಅನುಭವ ಆಗಿದೆ.
ವಿಜಯಪುರ ಜಿಲ್ಲೆಯ ತೀಕೋಟ ತಾಲೂಕಿನಲ್ಲಿ ಇಂದು (ಮಂಗಳವಾರ) ಸಂಜೆ 7:30ರ ಸುಮಾರಿಗೆ ಜನರಿಗೆ ಭೂಕಂಪನದ ಅನುಭವ ಆಗಿದೆ. ಭಾರಿ ಸದ್ದಿನಿಂದ ಭೂಮಿ ನಡುಗಿದ ಅನುಭವ ಆಗಿದೆ.
ಭೂಕಂಪನ ಹಿನ್ನೆಲೆಯಲ್ಲಿ ಜನರು ಮನೆ ಬಿಟ್ಟು ಹೊರ ಬಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಭೂಕಂಪನ ಮರುಕಳಿಸಿದ ಹಿನ್ನೆಲೆಯಲ್ಲಿ ತಿಕೋಟ ತಾಲೂಕಿನ ಜನರಲ್ಲಿ ಆತಂಕ ಮನೆ ಮಾಡಿದೆ.
Ramya kosira
Publish Date: Fri, 17 Feb 2023 (12:28 IST)
Updated Date: Fri, 17 Feb 2023 (13:08 IST)