Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೈಲ್ವೆ ನಿಲ್ದಾಣದಲ್ಲಿ 16 ಕೋಟಿ ಮೌಲ್ಯದ 32 ಕೆ.ಜಿ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು

ರೈಲ್ವೆ ನಿಲ್ದಾಣದಲ್ಲಿ 16 ಕೋಟಿ ಮೌಲ್ಯದ 32 ಕೆ.ಜಿ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು
bangalore , ಗುರುವಾರ, 3 ಮಾರ್ಚ್ 2022 (18:38 IST)
ಕೋನಾರ್ಕ್ ಎಕ್ಸ್ ಪ್ರೆಸ್‍ನಲ್ಲಿ ಸಾಗಿಸುತ್ತಿದ್ದ ಸುಮಾರು 16 ಕೋಟಿ ಮೌಲ್ಯದ 32 ಕೆ.ಜಿ ಚಿನ್ನವನ್ನು ಗವರ್ನ್‍ಮೆಂಟ್ ರೈಲ್ವೇ ಪೊಲೀಸ್(GRP) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಂಬೈಯಿಂದ ಮಂಗಳವಾರ ರಾತ್ರಿ 11.30ರ ಸುಮಾರಿಗೆ ಭುವನೇಶ್ವರಕ್ಕೆ ಆಗಮಿಸಿದ ರೈಲಿನಲ್ಲಿ ಅಕ್ರಮ ಚಿನ್ನ ಪತ್ತೆಯಾಗಿದ್ದು, ಬುಧವಾರ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ನಾಲ್ವರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಧಿಕಾರಿಗಳ ವಶವಾದ ನಾಲ್ವರನ್ನು ಹಸ್ಮುಖಲಾಲ್ ದೀಕ್ಷಿತ್, ಮಹೇಶ್ ಭೋಮ್ಸರ್, ಸುರೇಶ್ ಸಹದೇವ್ ಖರೆ ಮತ್ತು ದೀಪಕ್ ಪಟೇಲ್ ಎಂದು ಗುರುತಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ(GST) ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಆರ್ ಪಿ  ಸ್ಪಷ್ಟಪಡಿಸಿದೆ.ನಾಲ್ವರು ವ್ಯಕ್ತಿಗಳು ಮುಂಬೈಯಿಂದ ನಾಲ್ಕು ಬ್ಯಾಗ್ ಗಳ ಜೊತೆ ಬಂದಿದ್ದರು. ಒಂದೊಂದು ಬ್ಯಾಗ್ ನಲ್ಲಿ ಸುಮಾರು 8 ಕೆ.ಜಿಯಷ್ಟು ಬಂಗಾರ ತುಂಬಿದ್ದರು. ಭುವನೇಶ್ವರದಲ್ಲಿ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಅವರ ಪ್ಲ್ಯಾನ್ ಆಗಿತ್ತು. ಈ ವೇಳೆ ನಾಲ್ವರು ವ್ಯಕ್ತಿಗಳ ಮೇಲೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಚಿನ್ನ ಸಾಗಾಟ ಮಾಡುತ್ತಿರುವುದು ಬಯಲಾಗಿದೆ ಎಂದು ಭುವನೇಶ್ವರದ ಜಿಆರ್ ಪಿ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.ಈ ಆಭರಣಗಳಿಗೆ ಅವರು ತೆರಿಗೆ ಪಾವತಿಸುತ್ತಿರಲಿಲ್ಲ. ಹೀಗಾಗಿ ಈ ಚಿನ್ನವನ್ನು ಯಾರಿಗೆ ನೀಡುತ್ತಿದ್ದೇವೆ ಎಂಬುದನ್ನು ಸರಿಯಾಗಿ ಬಾಯಿಬಿಟ್ಟಿಲ್ಲ. ಒಟ್ಟಿನಲ್ಲಿ ಈ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇತ್ತ 32 ಕೆ.ಜಿ ಚಿನ್ನವನ್ನು ಜಿಆರ್‍ಪಿ ಅಧಿಕಾರಿಗಳು ಕೈಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ – ರಷ್ಯಾ ಆರೋಪ