Publish Date: Wed, 02 Feb 2022 (14:08 IST)
Updated Date: Wed, 02 Feb 2022 (19:14 IST)
ಮಾಹಿತಿ ಹಂಚಿಕೊಂಡಿರುವಂತ ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ, ಬೆಂಗಳೂರು ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ರೆಸ್ಟ್ ರೂಂನಲ್ಲಿದ್ದ ಅಕ್ರಮ ಪ್ರಾರ್ಥನಾ ಸ್ಥಳವನ್ನು ಮತ್ತೆ ರೈಲ್ವೆ ಸಹಾಯಕರ ರೆಸ್ಟ್ ರೂಂ ಆಗಿ ಬದಲಾಯಿಸಲಾಗಿದೆ. ವಿಭಾಗೀಯ ರೇಲ್ವೆ ಪ್ರಬಂಧಕರಿಗೆ ಧನ್ಯವಾದಗಳು ಅಂತ ತಿಳಿಸಿದ್ದಾರೆ.
ವಿವಿಧ ಹಿಂದೂ ಪರ ಸಂಘಟನೆಗಳು ರೈಲ್ವೆ ನಿಲ್ದಾಣದಲ್ಲಿಯೇ ಅಕ್ರಮ ಧಾರ್ಮಿಕ ಚಟುವಟಿಕೆ ನಡೆಸುತ್ತಿರುವ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತ ಪಡಿಸಿದ್ದವು. ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದವು. ಈ ಬೆನ್ನಲ್ಲೇ ಈಗ ಪ್ರಾರ್ಥನಾ ಸ್ಥಳವನ್ನು ಬದಲಾವಣೆ ಮಾಡಲಾಗಿದೆ.
geetha
Publish Date: Wed, 02 Feb 2022 (14:08 IST)
Updated Date: Wed, 02 Feb 2022 (19:14 IST)