ಪೊಲೀಸರಿಗೆ ಗುಂಡಿ ತೋಡೋ ಗ್ಯಾಂಗನ್ನ ಹೆಡೆಮುರಿ ಕಟ್ಟುವಲ್ಲಿ ಪೊಲೀಸಲು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದ ತಂಡ ಈ ಸಾಧನೆ ಮಾಡಿದೆ.
ಹಳ್ಳಿಗೆ ನುಗ್ಗಿ ಇಬ್ಬರು ನಟೋರಿಯಸ್ ಆರೋಪಿಗಳನ್ನ ಬಂಧಿಸಿದ್ದಾರೆ ಪೊಲೀಸರು. ಹೊಸಕೋಟೆಯ ಕಟ್ಟಿಗೇನಹಳ್ಳಿ ಗ್ರಾಮಕ್ಕೆ ಎಂಟ್ರಿ ಕೊಟ್ಟ 150 ಮಂದಿ ಪೊಲೀಸ್ ಸಿಬ್ಬಂದಿ, ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚಾಗ್ತಿರೋ ಗಂಧದ ಮರದ ಕಳ್ಳತನ ಮಾಡುತ್ತಿದ್ದ ಕಟ್ಟಿಗೇನಹಳ್ಳಿಯ ನಟೋರಿಯಸ್ ಗ್ಯಾಂಗ್ ಸದಸ್ಯರು ಬಂಧನಕ್ಕೆ ಒಳಗಾಗಿದ್ದಾರೆ.
ಒಂದು ವೇಳೆ ಐವತ್ತು ಮಂದಿ ಪೊಲೀಸರು ಕಟ್ಟಿಗೇನಹಳ್ಳಿಗೆ ಹೋಗಿದ್ರೆ ಅವರ ಜೀವಕ್ಕೇ ಸಂಚಕಾರ ತರ್ತಿದ್ರು ಕಟ್ಟಿಗೆ ಪಾಳ್ಯದ ನಟೋರಿಯಸ್ ಗ್ಯಾಂಗ್ ನವರು. ಹೀಗಾಗಿ 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಡಿಸಿಪಿ ದೇವರಾಜ್, ಡಿಸಿಪಿ ಅಬ್ದುಲ್ ಅಹದ್ ಟೀಂನಿಂದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. 200 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿರೋ ಕಟ್ಟಿಗೇನಹಳ್ಳಿ ಗ್ಯಾಂಗ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.