Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ಯಾಂಕ್ ಅಕೌಂಟಿಗೆ ಕನ್ನ ಹಾಕುತ್ತಿದ್ದ ಖದೀಮನ ಬಂಧನ

ಬ್ಯಾಂಕ್ ಅಕೌಂಟಿಗೆ ಕನ್ನ ಹಾಕುತ್ತಿದ್ದ ಖದೀಮನ ಬಂಧನ
ಹುಕ್ಕೇರಿ , ಶುಕ್ರವಾರ, 28 ಡಿಸೆಂಬರ್ 2018 (19:51 IST)
ಯೋಧರಿಬ್ಬರು ಸೇರಿದಂತೆ 8 ಜನರ ಬ್ಯಾಂಕ್ ಅಕೌಂಟಗೆ ಕನ್ನ ಹಾಕಿ 3 ಲಕ್ಷಕ್ಕೂ ಅಧಿಕ ಹಣವನ್ನು ವಿವಿಧ ಎಟಿಎಂ ಗಳಿಂದ  ಹಣ ವಿಥ್ ಡ್ರಾ ಮಾಡಿದ್ದ ಖತರ್ನಾಕ್ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ರಾಜ್ಯದ ಗಯಾ ಜಿಲ್ಲೆಯ ಡುಮರಿ ಗ್ರಾಮದ ರೋಹಿತೇಶ ಕುಮಾರ ಬಂಧಿತ ಆರೋಪಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸ್ಟೇಟ್ ಬ್ಯಾಂಕ್ ಓಫ್ ಇಂಡಿಯಾ ಶಾಖೆ 8 ಗ್ರಾಹಕರ ಬ್ಯಾಂಕ್ ಆಕೌಂಟ್ ಹಣ ಹ್ಯಾಕ್ ಮಾಡಿ ಬೆಳಗಾವಿ, ಕೊಲ್ಲಾಪೂರ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ಎಟಿಎಂ ಕೇಂದ್ರಗಳಿಂದ ಖದೀಮ ಹಣ ಡ್ರಾ ಮಾಡಿಕೊಂಡಿದ್ದ.

ಖತರ್ನಾಕ ರೋಹಿತೇಶ ಎಂಬಾತ ಟಿ ಎಂ ಕೇಂದ್ರಗಳ ಎದುರು ಸರತಿ ಸಾಲಿನಲ್ಲಿ ನಿಂತು ಎಟಿಎಂ ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಬಳಿಕ ಎಟಿಎಂ ಡ್ರಾ ಮಾಡುವ ಸಂದರ್ಭದಲ್ಲಿ ಕದ್ದು ಪಾಸ್ವರ್ಡ್ ನೋಡಿ ನಮೂದಿಸಿಕೊಳ್ಳುತ್ತಿದ್ದ. ಬಳಿಕ ಅಲ್ಲಿಂದ ತೆರಳಿ ಆನ್ಲೈನ್ ಅಪ್ಲಿಕೇಶನ್ ಮೂಲಕ ಗ್ರಾಹಕರ ಕೊನೆಯ 4 ಎಟಿಎಂ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಿಸಿ ಹಣ ಎಗರಿಸುತ್ತಿದ್ದ.



Share this Story:

Follow Webdunia kannada

ಮುಂದಿನ ಸುದ್ದಿ

ಆಹಾರದಲ್ಲಿ ಕಲಬೆರಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಎಂದ ಡಿಸಿ