Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಿಂಗ್ ಮೇಕರ್ ಅಲ್ಲ; ಕೀ ಮೇಕರ್ ಅರೆಸ್ಟ್

ಕಿಂಗ್ ಮೇಕರ್ ಅಲ್ಲ; ಕೀ ಮೇಕರ್ ಅರೆಸ್ಟ್
ಬೆಂಗಳೂರು , ಮಂಗಳವಾರ, 2 ಏಪ್ರಿಲ್ 2019 (21:01 IST)
ಪ್ರಖ್ಯಾತ ಕಿಂಗ್ ಮೇಕರ್ ಅಲ್ಲ, ಕುಖ್ಯಾತ ಕೀ ಮೇಕರ್ ನ್ನು ಪೊಲೀಸರು ಬಂಧಿಸಿದ್ದಾರೆ.

ಕೀ ಮೇಕಿಂಗ್ ಯಂತ್ರ ಇಟ್ಟುಕೊಂಡು ನಕಲಿ ಕೀಗಳನ್ನು ಇಟ್ಟುಕೊಂಡು ಅವುಗಳಿಂದ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗ ತೆಗೆದು ಒಳ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದವ ಈಗ ಅಂದರ್ ಆಗಿದ್ದಾನೆ.

ಬೆಂಗಳೂರಿನ ಉತ್ತರಹಳ್ಳಿಯ ಭುವನೇಶ್ವರಿ ನಗರದ ಪ್ರಕಾಶ್ ಬಂಧಿತ. ಈತನಿಂದ 40 ಲಕ್ಷದ ಚಿನ್ನಾಭರಣ, ಬೆಳ್ಳಿ, ಸಾವಿರಕ್ಕೂ ಹೆಚ್ಚು ನಕಲಿ ಕೀಗಳನ್ನು ವಶಕ್ಕೆ ಪಡೆಯಲಾಗಿದೆ.

ಹತ್ತು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ಆರೋಪಿ ಕಳೆದ ವರ್ಷ ಬಂಧನವಾಗಿದ್ದ. ಆದರೆ ಜಾಮೀನು ಪಡೆದು ಹೊರಬಂದು ಮತ್ತೆ ಕಳ್ಳತನಕ್ಕೆ ಮುಂದಾಗಿದ್ದನು.



Share this Story:

Follow Webdunia kannada

ಮುಂದಿನ ಸುದ್ದಿ

ಆಕೆಗೆ ಆರ್ಡರ್ ಮಾಡಿದ್ದು ಊಟ, ಆದರೆ ಆತ ಕೇಳಿದ್ದು…?