Publish Date: Fri, 31 Aug 2018 (17:46 IST)
Updated Date: Fri, 31 Aug 2018 (17:49 IST)
ಸೈರನ್ ಹಾಕಿಕೊಂಡು, ಎಷ್ಟೇ ಹಾರನ್ ಮಾಡಿದ್ರು ಆಂಬುಲೆನ್ಸ್‍ಗೆ ದಾರಿ ಬಿಡದೆ ಮಂಗಳೂರಿನ ಕಾರೊಂದು ಅಮಾನವೀಯತೆ ಮೆರೆದ ಘಟನೆ ಮಂಗಳೂರಿನ ಬಿ.ಸಿ.ರೋಡ್‍ನಲ್ಲಿ ನಡೆದಿದೆ.
ಮಧ್ಯಾಹ್ನ ತುಂಬಾ ಸಿರಿಯಸ್ ಆಗಿದ್ದ 45 ವರ್ಷದ ಅಮಿರ್‍ಜಾನ್ ಎಂಬುವರನ್ನ ಚಿಕ್ಕಮಗಳೂರಿನಿಂದ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ ಮಂಗಳೂರು ಸಮೀಪಿಸುತ್ತಿದ್ದಂತೆ ಕೆ.ಎ.19 ಮಂಗಳೂರು ನೋಂದಣಿಯ ಕಾರು ಚಾಲಕನೊಬ್ಬ ಸುಮಾರು 10 ಕಿ.ಮೀ. ಆಂಬುಲೆನ್ಸ್‍ಗೆ ದಾರಿ ಬಿಡದೆ ಸತಾಯಿಸಿದ್ದಾನೆ.
ಆಂಬುಲೆನ್ಸ್‍ನ ಸೈರನ್ ಕೇಳಿ ನೂರಾರು ವಾಹನಗಳು ದಾರಿ ಬಿಟ್ರು ಇದೊಂದು ಕಾರು ಮಾತ್ರ ದಾರಿ ಬಿಟ್ಟಿಲ್ಲ. ಗಾಡಿಯಲ್ಲಿ ಸಿರಿಯಸ್ ಪೇಶೆಂಟ್ ಇದ್ರು ಆಂಬುಲೆನ್ಸ್ ಚಾಲಕ ಬಿ.ಸಿ.ರೋಡ್‍ನಿಂದ ಐದು ಕಿ.ಮೀ. ಹಿಂದೆ ನಿಂತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ರು ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಂಬುಲೆನ್ಸ್ ಚಾಲಕ ಮಂಗಳೂರು ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿದ್ದಾನೆ.
Jagadeesh
Publish Date: Fri, 31 Aug 2018 (17:46 IST)
Updated Date: Fri, 31 Aug 2018 (17:49 IST)