Publish Date: Sat, 16 May 2020 (18:03 IST)
Updated Date: Sat, 16 May 2020 (18:05 IST)
ಜೀವದ ಜೊತೆಗೆ ಜೀವನ ನಡೆಸುವುದು ಕೂಡ ಮುಖ್ಯ ಆಗಿರುವುದರಿಂದ ನಾಲ್ಕನೇ ಹಂತದ ಲಾಕ್ ಡೌನ್ ಮೊದಲಿನಂತೆ ಇರುವುದಿಲ್ಲ.
ಹೀಗಂತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಲಾಕ್ ಡೌನ್ ಪರಿಣಾಮ ಇಡೀ ವಿಶ್ವ, ಭಾರತ, ರಾಜ್ಯ ಆರು ತಿಂಗಳು ಹಿಂದಕ್ಕೆ ಹೋಗಿದೆ. ಆದ್ದರಿಂದ ಜೀವದ ಜೊತೆಗೆ ಜೀವನ ನಡೆಸುವುದು ಮುಖ್ಯ.
ಹಂತ ಹಂತವಾಗಿ ಲಾಕ್ ಡೌನ್ ಸಲಡಿಕೆ ಅನಿವಾರ್ಯ, ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಕೋವಿಡ್-19 ವೈರಾಣು ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಅದರ ವಿರುದ್ಧ ಹೋರಾಡುವ ಮೂಲಕ ನಾವು ಬದುಕಬೇಕು ಎಂದಿದ್ದಾರೆ.