ರಾಜ್ಯ ವಿಧಾನ ಪರಿಷತ್ ನಲ್ಲಿಂದು ಬಜೆಟ್ ಚರ್ಚೆ ವೇಳೆ ಜೆಡಿಎಸ್ ಸದಸ್ಯ ಬಿ ಎಂ ಫಾರೂಖ್ ಅವರು ಕರಾವಳಿಯ ಬಗ್ಗೆ ಧ್ವನಿ ಎತ್ತಿ ಮಾತನಾಡಿದರು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆಗ್ತಿದೆ. ಕರ್ನಾಟಕದ ಮೂರು ಜಿಲ್ಲೆಗಳು ಸಮುದ್ರದ ಗಡಿಯನ್ನು ಹಂಚಿಕೊಳ್ಳುತ್ತವೆ.
ರಾಜ್ಯ ವಿಧಾನ ಪರಿಷತ್ ನಲ್ಲಿಂದು ಬಜೆಟ್ ಚರ್ಚೆ ವೇಳೆ ಜೆಡಿಎಸ್ ಸದಸ್ಯ ಬಿ ಎಂ ಫಾರೂಖ್ ಅವರು (JDS MLC BM Farooq) ಕರಾವಳಿಯ ಬಗ್ಗೆ ಧ್ವನಿ ಎತ್ತಿ ಮಾತನಾಡಿದರು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆಗ್ತಿದೆ (Russian Ukraine War). ಕರ್ನಾಟಕದ ಮೂರು ಜಿಲ್ಲೆಗಳು (Coastal Karnataka) ಸಮುದ್ರದ ಗಡಿಯನ್ನು ಹಂಚಿಕೊಳ್ಳುತ್ತವೆ. ಆ ಕಡೆಯಿಂದ ಮಿಸೈಲ್ ಏನಾದ್ರೂ ಹೊಡೆದ್ರೆ ಬೆಂಕಿ ನಂದಿಸಲು ಸರಿಯಾದ ಫೈರ್ ಸೇಫ್ಟಿ ವ್ಯವಸ್ಥೆ ಇಲ್ಲಿಲ್ಲ (Fire Extinguisher) ಎಂದು ಆತಂಕ ವ್ಯಕ್ತಪಡಿಸಿದರು.
ಅದೇ ರೀತಿ ಮಂಗಳೂರು ಏರ್ಪೋರ್ಟ್ ನಲ್ಲೂ ಸರಿಯಾದ ವ್ಯವಸ್ಥೆ ಇಲ್ಲ. ಮುಂಬೈ ಹೊರತು ಪಡಿಸಿ ಉಳಿದ ಥಾಣಾ ಮುಂತಾದ ಪ್ರದೇಶ ಅಭಿವೃದ್ಧಿಗೊಳಿಸಲಾಗುತ್ತಿದೆ. ಆದ್ರೆ ಬೆಂಗಳೂರು ಹೊರತು ಪಡಿಸಿ ಕರಾವಳಿಯಲ್ಲಿ ಡಾಟಾ ಸೆಂಟರ್ ಮಾಡಿ ಎಂದು ಆಗ್ರಹಿಸಿದ ಅವರು ಇಲ್ಲಿ ಸಾಕಷ್ಟು ಪರಿಣಿತರಿದ್ದಾರೆ. ಅವರುಗಳ ಸೇವೆ ಪಡೆಯಿರಿ. ಪ್ರತಿ ಬಾರಿ ಕಡಲ್ಕೊರತೆ ತಡೆಗೆ ಸಮುದ್ರ ಕಲ್ಲು ಹಾಕಿ ಸಾವಿರಾರು ಕೋಟಿ ರೂಪಾಯಿ ಹಣ ವೇಸ್ಟ್ ಮಾಡ್ತೀರಿ. ವಿದೇಶದಲ್ಲೆಲ್ಲ ನಡುಗಡ್ಡೆ ರೀತಿಯಲ್ಲಿ ಸಮುದ್ರ ತೀರದಲ್ಲಿ ವೈಜ್ಞಾನಿಕವಾಗಿ ತಡೆಯಲಾಗುತ್ತಿದೆ. ಸಮುದ್ರ ತೀರದುದ್ದಕ್ಕೂ ಗಾರ್ಡನ್ ಮಾಡಲಾಗುತ್ತಿದೆ. ನೀವು ಅಲ್ಲಿಗೆ ಪ್ರವಾಸ ಮಾಡಿ ಬಂದು, ಆ ತಂತ್ರಜ್ಞಾನವನ್ನು ತಂದು ಇಲ್ಲೂ ಅಳವಡಿಸಿ ಎಂದು ಜೆಡಿಎಸ್ ಮೇಲ್ಮನೆ ಸದಸ್ಯ ಫಾರೂಖ್ ಮನವಿ ಮಾಡಿದರು.