Publish Date: Wed, 16 Mar 2022 (11:54 IST)
Updated Date: Wed, 16 Mar 2022 (09:47 IST)
ಕೊಯಮತ್ತೂರು: ತಾಯಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿದ ಘಟನೆ ನಡೆದಿದೆ.
50 ವರ್ಷದ ವ್ಯಕ್ತಿಯನ್ನು ಈ ಸಂಬಂಧ ಬಂಧಿಸಲಾಗಿದೆ. ಕೊಲೆಗೀಡಾದ ಪುತ್ರ ಮದ್ಯವ್ಯಸನಿಯಾಗಿದ್ದ. ಕುಡಿಯಲು ಹಣ ಕೊಡುವಂತೆ ಸದಾ ತಾಯಿಗೆ ಹಿಂಸೆ ನೀಡುತ್ತಿದ್ದ.
ಘಟನೆ ನಡೆದ ದಿನವೂ ತಾಯಿ ಮೇಲೆ ಹಲ್ಲೆಗೆ ಮುಂದಾದಾಗ ಆತನಿಂದ ಚಾಕು ಪಡೆದು ತಂದೆಯೇ ಇರಿದು ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Krishnaveni K
Publish Date: Wed, 16 Mar 2022 (11:54 IST)
Updated Date: Wed, 16 Mar 2022 (09:47 IST)