ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ನ ಎರಡನೇ ದಿನವಾದ ಇಂದೂ ಕೂಡಾ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಂದ್ ಎಫೆಕ್ಟ್ ಜನಸಾಮಾನ್ಯರನ್ನು ಬಾಧಿಸಿಲ್ಲ.
ಸರಕಾರಿ, ಖಾಸಗಿ ಬಸ್ಗಳು ಎಂದಿನಂತೆಯೇ ರಸ್ತೆಗೆ ಇಳಿದರೆ ಟ್ಯಾಕ್ಸಿ, ಬಾಡಿಗೆ ರಿಕ್ಷಾಗಳು ಓಡಾಡುತ್ತಿವೆ. ಅಂಗಡಿ-ಮಳಿಗೆ, ಮಾಲ್, ಸಿನಿಮಾ ಥಿಯೇಟರ್, ಬ್ಯಾಂಕ್, ಶಾಲೆಗಳು ತೆರೆದಿದ್ದು ಬಂದ್ಗೆ ಜನಸಾಮಾನ್ಯರು ‘ನೋ’ ಎಂದಿದ್ದಾರೆ. ಕಾರ್ಮಿಕ ಸಂಘಟನೆಗಳ ಬಂದ್ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೂಡಾ ವಿಜಯ ಬ್ಯಾಂಕ್ ಬರೋಡಾ ಬ್ಯಾಂಕ್ ಜೊತೆ ವಿಲೀನವನ್ನು ಖಂಡಿಸಿ ಬಂದ್ಗೆ ಕರೆ ನೀಡಿದೆ. ಆದರೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಮಾತ್ರ ಇದಾವುದಕ್ಕೂ ಸೊಪ್ಪು ಹಾಕದೆ ಇರುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗುವ ಬಂದ್ ವಿರೋಧಿಸಿದ್ದಾರೆ.