ಬೆಂಗಳೂರು: ನಿಮ್ಮ ಅಮೂಲ್ಯವಾದ ಮತವನ್ನು ಗುರುತಿನ ಚೀಟಿ ಇಲ್ಲ ಎಂಬ ಕಾರಣಕ್ಕೆ ಹಾಳು ಮಾಡಿಕೊಳ್ಳಬೇಡಿ. ಮತದಾನ ಮಾಡಲು ಚುನಾವಣಾ ಆಯೋಗದ ಗುರುತಿನ ಚೀಟಿಯೇ ಬೇಕೆಂದಿಲ್ಲ.
ಗುರುತಿನ ಚೀಟಿ ಕಳೆದುಹೋಗಿದ್ದರೆ, ಅಥವಾ ತಕ್ಷಣಕ್ಕೆ ಕೈಯಲ್ಲಿ ಇಲ್ಲದೇ ಇದ್ದರೆ ಸರ್ಕಾರದ ಇಲಾಖೆ ನೀಡಿದ ಬೇರೆ ಯಾವುದೇ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು.
ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ರೇಷನ್ ಕಾರ್ಡ್ ಇತ್ಯಾದಿ ಯಾವುದೇ ಗುರುತಿನ ಚೀಟಿ ಜತೆಗೆ ವೋಟರ್ ಸ್ಲಿಪ್ ಇದ್ದರೂ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.