ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಪಕ್ಕದ ಸೈಟ್ ಗೆ ಹಾಕುವಂತಿಲ್ಲ, ಸಿಕ್ಕ ಸಿಕ್ಕಲ್ಲಿ ಕಸ ಎಸೆದರೆ ನಮಗೇ ತೊಂದರೆ. ಆದರೆ ಕಸದ ಗಾಡಿ ಸರಿಯಾಗಿ ಬರದೇ ಇದ್ದರೆ ಏನು ಮಾಡೋದು?
ಇದೀಗ ನಗರದ ವಾಸಿಗಳ ಸಮಸ್ಯೆ ಇದೇ ಆಗಿದೆ. ಕಳೆದೆರಡು ದಿನಗಳಿಂದ ಕಸದ ಗಾಡಿಗಳು ಮನೆ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ ಕಸ ವಿಲೇವಾರಿ ಮಾಡುವ ನೌಕರರ ಮುಷ್ಕರ.
ಬಿಬಿಎಂಪಿ ಕಳೆದ ಎರಡು ತಿಂಗಳಿನಿಂದ ಬಿಲ್ ಪಾವತಿಸದ ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ಕಸ ವಿಲೇವಾರಿ ನೌಕರರು ಮತ್ತು ಆಟೋ ವಿಲೇವಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಸೂಕ್ತವಾಗಿ ಕಸ ವಿಲೇವಾರಿಯಾಗದೇ ಬೆಂಗಳೂರು ನಿವಾಸಿಗಳು ಒದ್ದಾಡುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.