Publish Date: Mon, 11 Jun 2018 (09:25 IST)
Updated Date: Mon, 11 Jun 2018 (09:26 IST)
ಗದಗ: ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಭೋಗಸ್ ಮತ ಹಾಕಿಸಿ ಗೆದ್ದಿದ್ದಾರೆ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಆರೋಪಿಸಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಚ್ ಕೆ ಪಾಟೀಲ್ ವಿರುದ್ಧ ಈ ಸಂಬಂಧ ಬಿಜೆಪಿ ಹೋರಾಟ ನಡೆಸಲಿದೆ. ಅವರ ಶಾಸಕ ಸ್ಥಾನ ಪ್ರಶ್ನಿಸಿ ಬಿಜೆಪಿ ದೂರು ನೀಡಲಿದೆ ಎಂದಿದ್ದಾರೆ.
ಇನ್ನು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಈ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ನಾನು ಜನರ ಮುಲಾಜಿನಲ್ಲಿ ಇಲ್ಲ ಅಂತಾರೆ, ಶಾಸಕರು ಸಚಿವರಾಗಲು ಹೋರಾಟ ಮಾಡ್ತಿದ್ದಾರೆ. ಹೀಗಾದರೆ ರಾಜ್ಯದ ಜನರ ಸಮಸ್ಯೆ ಕೇಳೋರು ಯಾರು ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Mon, 11 Jun 2018 (09:25 IST)
Updated Date: Mon, 11 Jun 2018 (09:26 IST)