Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೈಸೂರು : ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದವನಿಗೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿದೆ.
ತಮಿಳುನಾಡು ಈರೋಡ್ ಜಿಲ್ಲೆಯ ಸತ್ಯಮಂಗಲದ ಎಂ. ಕೋಮರಪಾಳ್ಯದ ಕೂಲಿ ಕೆಲಸಗಾರ ಲಕ್ಷೀನಾರಾಯಣ ಮೂರ್ತಿ (38) ಶಿಕ್ಷೆಗೊಳಗಾದವನು.
ಈತ 2018ರ ಸೆ.2 ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಎಂಸಿ ಹಿಂಭಾಗದ ಮನೆಗೆ ನುಗ್ಗಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಪ್ರತಿನಿತ್ಯ ಸಂಜೆ ಆ ವೃದ್ಧೆಯ ಮನೆಗೆ ಹೋಗುತ್ತಿದ್ದ ಪ್ರದೀಪ್ಕುಮಾರ್ ಎಂದಿನಂತೆ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು, ಆರೋಪ ಸಾಬೀತು ಗಿದೆ ಎಂದು ತೀರ್ಪು ನೀಡಿ, ಕಠಿಣ ಜೀವಾವಧಿ ಸಜೆ ಹಾಗೂ 20 ಸಾವಿರ ರು. ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ ಕೆ. ನಾಗರಾಜ ವಾದಿಸಿದ್ದರು.