ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಜತೆಗೆ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಿರ್ಮಲಾನಂದ ಸ್ವಾಮೀಜಿಗಳು ಕೆಸಿ ವೇಣುಗೋಪಾಲ್ ಬಳಿ ಇಕ್ಕಟ್ಟಿಗೆ ಸಿಲುಕುವಂತಹ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಲಾಗದೇ ವೇಣುಗೋಪಾಲ್ ನಕ್ಕು ಸುಮ್ಮನಾಗಿದ್ದಾರೆ.
ವೇಣುಗೋಪಾಲ್ ಬಳಿ ನಿಮ್ಮ ಊರು ಯಾವುದು ಎಂದು ಸ್ವಾಮೀಜಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವೇಣುಗೋಪಾಲ್ ಕಾಸರಗೋಡು ಎಂದಿದ್ದಾರೆ. ಕಾಸರಗೋಡು, ಕೇರಳ ಮತ್ತು ಕರ್ನಾಟಕದ ಗಡಿ ಭಾಗದಲ್ಲಿರುವ ಕನ್ನಡಿಗರು ನೆಲೆಸಿರುವ ಜಿಲ್ಲೆ. ಹೀಗಾಗಿ ವೇಣುಗೋಪಾಲ್ ಗೆ ನಿರ್ಮಲಾನಂದ ಸ್ವಾಮೀಜಿಗಳು ಕಾಸರಗೋಡು ಕೂಡಾ ಕರ್ನಾಟಕದ ಭಾಗ ಎಂದಿದ್ದಾರೆ. ಇದಕ್ಕೆ ಏನೂ ಉತ್ತರಿಸಲಾಗದ ವೇಣುಗೋಪಾಲ್ ನಕ್ಕು ಸುಮ್ಮನಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ