ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಜನಾಶೀರ್ವಾದ ಯಾತ್ರೆ ಕುರಿತಾಗಿ ಸ್ಪೋಟಗೊಂಡಿದ್ದ ಅಸಮಾಧಾನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮುಲಾಮು ಹಚ್ಚಿದ್ದಾರೆ.
ಇಬ್ಬರ ನಡುವೆ ಸಂಧಾನ ನಡೆಸಿರುವ ವೇಣುಗೋಪಾಲ್, ಇಬ್ಬರಿಗೂ ಒಪ್ಪಿಗೆಯಾಗುವ ಸೂತ್ರ ಮುಂದಿಟ್ಟಿದ್ದಾರೆ. ಡಿಸೆಂಬರ್ ಎರಡನೇ ವಾರದಿಂದ ಪರಮೇಶ್ವರ್ ಯಾತ್ರೆ ಕೈಗೊಳ್ಳಲಿದ್ದು, ಒಂದು ತಿಂಗಳ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಯಾತ್ರೆ ಕೈಗೊಳ್ಳಲಿದ್ದಾರೆ.
ಅದಾದ ಬಳಿಕ ಮಾರ್ಚ್ ನಲ್ಲಿ ಉಭಯ ನಾಯಕರು ಜತೆಯಾಗಿ ಜನಾಶೀರ್ವಾದ ಯಾತ್ರೆ ಕೈಗೊಳ್ಳುವಂತೆ ವೇಣುಗೋಪಾಲ್ ನೀಡಿರುವ ಸಲಹೆಗೆ ಉಭಯ ನಾಯಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ