Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಮಾರ್ಗಸೂಚಿಯಲ್ಲಿ ಪರಿಷ್ಕರಣೆ

ಕೊರೊನಾ ಮಾರ್ಗಸೂಚಿಯಲ್ಲಿ ಪರಿಷ್ಕರಣೆ
ಬೆಂಗಳೂರು , ಮಂಗಳವಾರ, 28 ಡಿಸೆಂಬರ್ 2021 (15:17 IST)
ಕೋವಿಡ್ ಹಾಗೂ ಓಮೈಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜನವರಿ 7 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೈಟ್‌ ಕರ್ಫ್ಯೂ ವಿಧಿಸಿದೆ. ಅಲ್ಲದೇ ಹೋಟೆಲ್, ಬಾರ್, ರೆಸ್ಟೊರಂಟ್, ಪಬ್ ಹಾಗೂ ಮನರಂಜನಾ ತಾಣಗಳಲ್ಲಿ ಶೇ 50 ರಷ್ಟು ಜನರಿಗೆ ಮಾತ್ರ ಅನುಮತಿ ನೀಡಬೇಕು ಎಂಬ ಆದೇಶ ಮಾಡಿದೆ.
ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಆಹಾರ ಮತ್ತು ಪಾನೀಯ ಒದಗಿಸುವ ಸ್ಥಳಗಳಲ್ಲಿ ಮಾತ್ರ ಆಸನಗಳ ಶೇ 50 ರಷ್ಟು ಮಾತ್ರ ಸೇವೆ ನೀಡಬೇಕು. ಉಳಿದಂತೆ ಹೋಟೆಲ್‌ಗಳಲ್ಲಿನ ಕೋಣೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಕೋಣೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು ಹೋಟೆಲ್‌ಗಳ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಅನುಮೋದಿತ ಸಾಮರ್ಥ್ಯಕ್ಕೆ ಅನುಗುಣವಾಗು ಆತಿಥ್ಯ ಕಲ್ಪಿಸಬಹುದು' ಎಂದು ತಿಳಿಸಿದ್ದಾರೆ.
 
ಹೊಸ ವರ್ಷಾಚರಣೆಗೆ ಹೋಟೆಲ್ ಹಾಗೂ ಮನರಂಜನಾ ಸ್ಥಳಗಳಲ್ಲಿ ಜನದಟ್ಟಣೆ ಆಗಬಹುದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಡಿ 30 ರಿಂದ ಜನವರಿ 2ವರೆಗೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಒಟ್ಟು ಆಸನಗಳ ಶೇ 50 ರಷ್ಟು ಮಾತ್ರ ಕಾರ್ಯಾಚರಿಸುವುದು ಎಂದು ಈ ಹಿಂದೆ ಆದೇಶ ಮಾಡಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಗೊರಗುಂಟೆಪಾಳ್ಯ ಫ್ಲೈ ಓವರ್ ಕ್ಲೋಸ್