Publish Date: Tue, 28 Dec 2021 (14:38 IST)
Updated Date: Tue, 28 Dec 2021 (14:59 IST)
ಪೀಣ್ಯ ಫ್ಲೈ ಓವರ್ ನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರರು ಪರದಾಡುತ್ತಿದ್ದಾರೆ. ಇನ್ನೂ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ನಮ್ಮ ಮೆಟ್ರೋ ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರಯಾಣಿಕರು ಮೆಟ್ರೋ ಆಯ್ಕೆ ಮಾಡಿಕೊಂಡಿದ್ದರಿಂದ ಮೆಟ್ರೋ ಹೊರಭಾಗದಲ್ಲಿ ನೂರಕ್ಕೂ ಹೆಚ್ಚು ಮಂದಿ ಕ್ಯೂ ನಿಂತಿರುವುದು ಕಂಡು ಬಂದಿದೆ. ಈ ಹಿನ್ನೆಲೆ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಇನ್ನೊಂದು ಬದಿ ಎಂಟ್ರೆನ್ಸ್ ಒಪನ್ ಮಾಡಲಾಗಿದ್ದು, ಆದರೆ ದಾಸರಹಳ್ಳಿಯಲ್ಲಿ ಪ್ರಯಾಣಿಕರ ಕ್ಯೂ ಮುಂದುವರೆದಿದೆ. ಜನವರಿ ಮೂರರ ತನಕ ಬಂದ್ ಇರುವುದರಿಂದ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
geetha
Publish Date: Tue, 28 Dec 2021 (14:38 IST)
Updated Date: Tue, 28 Dec 2021 (14:59 IST)