Publish Date: Sun, 13 Mar 2022 (16:38 IST)
Updated Date: Sun, 13 Mar 2022 (16:40 IST)
ಬೆಂಗಳೂರಿನ ಎನ್ ಸಿ ಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ನ್ಯೂಜಿಲ್ಯಾಂಡ್ ಗೆ ಅಕ್ರಮವಾಗಿ ಸಾಗಟ ಮಾಡುತ್ತಿದ್ದ ಸಿಂಥಟಿಕ್ ಡ್ರಗ್ಸ್ ಅನ್ನ ವಶಕ್ಕೆ ಪಡೆಯಲಾಗಿದೆ. 1 ಕೆಜಿ 970 ಗ್ರಾಂ ಸ್ಯೂಡೋಫೆಡ್ರಿನ್ ಡ್ರಗ್ಸ್ ಪತ್ತೆಯಾಗಿದ್ದು, ಕೋರಿಯರ್ ಕಚೇರಿಯಿಂದ ನ್ಯೂಜಿಲ್ಯಾಂಡ್ ಗೆ ಆರೋಪಿಗಳು ರವಾನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾದ ಪ್ರಜೆ ಮತ್ತು ಸ್ಥಳೀಯ ವ್ಯಕ್ತಿಯ ಬಂಧನ ಮಾಡಲಾಗಿದೆ. ಗುಪ್ತಚರ ಅಧಿಕಾರಿಗಳ ಮಾಹಿತಿ ಹಿನ್ನಲೆಯಲ್ಲಿ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೋರಿಯರ್ ಮುಖಾಂತರ ನ್ಯೂಜಿಲ್ಯಾಂಡ್ ಗೆ ಕಳಿಸಲಾಗುತ್ತಿದ್ದ ಡ್ರಗ್ ಮೆಟಾಲಿಕ್ ವೈರ್ ಗಳನ್ನ ಸುತ್ತಿಡುವ ಮೆಟಲ್ ಹಿಂದೆ ಬಚ್ಚಿಟ್ಟು ಪಾರ್ಸಲ್ ರೆಡಿ ಮಾಡಿದ್ದ ಪೆಡ್ಲರ್ ಗಳು. ಸದ್ಯ ವೈರ್ ಮೆಟಲ್ ವಶಕ್ಕೆ ಪಡೆದು ಎನ್ ಸಿ ಬಿ ಅಧಿಕಾರಿಗಳು ಇಬ್ಬರನ್ನ ಬಂಧಿಸಿದ್ದಾರೆ.
geetha
Publish Date: Sun, 13 Mar 2022 (16:38 IST)
Updated Date: Sun, 13 Mar 2022 (16:40 IST)