Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದೆ.
ಇಂದು ಒಟ್ಟು 136 ಕೇಸ್ ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗೆ ಪಾಸಿಟಿವ್ ಕೇಸ್ಗಳ ಸಂಖ್ಯೆ ಇಳಿಕೆ ಕಂಡರೂ, ಮರಣ ಪ್ರಕರಣ ಕಡಿಮೆಯಾಗಿರಲಿಲ್ಲ. ಇಂದು ಮರಣ ಪ್ರಕರಣ ಕೂಡ ಇಳಿಕೆ ಕಂಡಿದೆ.
ಈ ಮೂಲಕ ಕೋವಿಡ್-19 ಮರಣ ಪ್ರಮಾಣ ಶೇ.1.47% ರಷ್ಟಿದೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಗದಗ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ. ಮಂಡ್ಯ, ರಾಯಚೂರು, ಉಡುಪಿ ಹಾಗೂ ವಿಜಯಪುರದಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.
ಪಾಸಿಟಿವಿಟಿ ರೇಟ್ 0.29%ಕ್ಕೆ ಇಳಿಕೆ ಕಂಡಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,622ಕ್ಕೆ ಇಳಿಮುಖಗೊಂಡಿದೆ. ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್ಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಇಂದು ಒಟ್ಟು 87 ಹೊಸ ಕೇಸ್ ಪತ್ತೆಯಾಗಿದೆ.