Publish Date: Sun, 18 Nov 2018 (20:46 IST)
Updated Date: Sun, 18 Nov 2018 (20:49 IST)
ಲಾರಿ ಮತ್ತು ಕೆ ಎಸ್ ಆರ್ಟಿಸಿ ಐರಾವತ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 40ಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದರೆ, ಹೆದ್ದಾರಿ ಕಿಲೋಮೀಟರ್ ವರೆಗೆ ಸಂಚಾರ ಬ್ಲಾಕ್ ಆಗಿತ್ತು.
ಅಪಘಾತದಲ್ಲಿ ಚಾಲಕ ಸೇರಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಪೂನಾ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯ ಹುಬ್ಬಳ್ಳಿ ಹತ್ತಿರದ ನಡೆದ ಘಟನೆ ಇದಾಗಿದೆ. ಖಾಸಗಿ ಬಸ್‌ನಲ್ಲಿದ್ದ ಚಾಲಕ ಸೇರಿ ಇಬ್ಬರು ತೀವ್ರಗಾಯಗೊಂಡಿದ್ದಾರೆ. 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ದಕ್ಷಿಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.