Publish Date: Mon, 29 Oct 2018 (18:08 IST)
Updated Date: Mon, 29 Oct 2018 (18:10 IST)
ಟಿಪ್ಪರ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಹಲವರಿಗೆ ಗಾಯಗಳಾಗಿವೆ. ಮೈಸೂರು -ಹುಣಸೂರು ಮುಖ್ಯರಸ್ತೆ ಬಿಳಿಕೆರೆ ಸಮೀಪ ಘಟನೆ ನಡೆದಿದೆ.
ಮುಖ್ಯರಸ್ತೆ ಮಲ್ಲಿನಾಥಪುರ ಸಮೀಪ ಈ ಅಪಘಾತ ಸಂಭವಿಸಿದೆ. ಅಪಘಾತ ಹಿನ್ನಲೆ ರಸ್ತೆ ಕಂದಕಕ್ಕೆ ಉರುಳಿ ಬಸ್ ಬಿದ್ದಿದೆ.
ಪಿರಿಯಾಪಟ್ಟಣದಿಂದ ಮೈಸೂರು ಕಡೆ ಬರುತ್ತಿದ್ದ ಬಸ್, ಮಲ್ಲಿನಾಥಪುರ ಸಮೀಪದ ತಿರುವಿನಲ್ಲಿ ಬಸ್ ಗೆ ಎದುರಿನಿಂದ ಬಂದು ಟಿಪ್ಪರ್ ಡಿಕ್ಕಿಹೊಡೆದಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಸ್ ಉರುಳಿದೆ. ಬಸ್ ನಲ್ಲಿದ್ದ ಯುವತಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.