ಬ್ರಿಗೇಡ್ ಮಿಲೇನಿಯಂ, ಸಾರಕ್ಕಿ ಮಾರ್ಕೆಟ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ಬಸವನಗುಡಿ, ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ, ಮಕ್ಕಳಕೂಟ, ವಿವಿ ಪುರಂ, ಟೌನ್ಹಾಲ್, ಮೆಜೆಸ್ಟಿಕ್, ಮಾಗಡಿ ರೋಡ್, ಟೋಲ್ಗೇಟ್, ಮಹಾಲಕ್ಷ್ಮೀ ಲೇಔಟ್, ಸ್ಯಾಂಕಿಟ್ಯಾಂಕ್.
ಸಂಜೆ ಮೋದಿ ನಡೆಸಲಿರೋ ರೂಟ್ ಮ್ಯಾಪ್ ನೋಡೋದಾದ್ರೆ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶುರುವಾಗಿ ಸಾರಕ್ಕಿ ಮಾರ್ಕೆಟ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ಬಸವನಗುಡಿ, ರಾಮಕೃಷ್ಣ ಆಶ್ರಮದವರೆಗೆ ರೋಡ್ ನಡೆಸಲಾಗುತ್ತೆ.
ಅಲ್ಲಿಂದ ಚಾಮರಾಜಪೇಟೆ, ಮಕ್ಕಳಕೂಟ, ವಿವಿ ಪುರಂ, ಟೌನ್ಹಾಲ್, ಮೆಜೆಸ್ಟಿಕ್, ಮಾಗಡಿ ರೋಡ್, ಟೋಲ್ಗೇಟ್, ಮಹಾಲಕ್ಷ್ಮೀ ಲೇಔಟ್ ಬರಲಿರುವ ರೋಡ್ ಮಲ್ಲೇಶ್ವರಂನ ಸ್ಯಾಂಕಿಟ್ಯಾಂಕ್ನಲ್ಲಿ ಮುಕ್ತಾಯವಾಗಲಿದೆ.
ಯಾವ ಕ್ಷೇತ್ರದಲ್ಲಿ ಮೋದಿ ಮೇನಿಯಾ..?
1. ಬೆಂಗಳೂರು ದಕ್ಷಿಣ
2. ಜಯನಗರ
3. ಪದ್ಮನಾಭನಗರ
4. ಬಸವನಗುಡಿ
5. ಚಾಮರಾಜಪೇಟೆ
6. ಚಿಕ್ಕಪೇಟೆ
7. ಗಾಂಧಿನಗರ
8. ಗೋವಿಂದರಾಜನಗರ
9. ರಾಜಾಜಿನಗರ
10. ಮಹಾಲಕ್ಷ್ಮಿಲೇಔಟ್
11. ಮಲ್ಲೇಶ್ವರಂ
ಬೆಂಗಳೂರಲ್ಲಿ ಮೋದಿ ಮತ್ತೆ ಈ ರೋಡ್ ಶೋಗೆ ಪ್ಲ್ಯಾನ್ ಮಾಡಿರೋ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿವೆ. ಮೋದಿ ರೋಡ್ ಇಂದ ಬೆಂಗಳೂರು ದಕ್ಷಿಣ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಗೋವಿಂದರಾಜನಗರ, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್ ಸೇರಿದಂತೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಪ್ರಭಾವ ಬೀರೋದು ಪಕ್ಕಾ ಆಗಿದೆ.
ಒಟ್ಟಿನಲ್ಲಿ ಈ ರಸ್ತೆಯಲ್ಲೆಲ್ಲಾ ರೋಡ್ ಶೋ ನಡೆಸೋ ಮೂಲಕ ಬೆಂಗಳೂರಿನಲ್ಲಿ ಬಿಜೆಪಿ ಅಲೆ ಎಬ್ಬಿಸಲು ಕೇಸರಿ ಪಡೆ ಪ್ಲಾನ್ ಮಾಡ್ಕೊಂಡಿದೆ. ಇದಕ್ಕೆ ಪ್ರಧಾನಿ ಸಚಿವಾಲಯದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.