Publish Date: Tue, 02 May 2023 (20:00 IST)
Updated Date: Tue, 02 May 2023 (20:20 IST)
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಚುನಾವಣಾ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಆರ್ ಪರ ರಮೇಶ್ ಮತಯಾಚನೆ, ರೋಡ್ ಶೋ ಮಾಡ್ತಿದ್ದಾರೆ.ಕೋಣನಕುಂಟೆಯ ವಿವಿಧ ವಾರ್ಡ್ ಗಳಲ್ಲಿ ರೋಡ್ ಶೋ ನಡೆಯುತ್ತಿದ್ದು,ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿಕೆ ಸುರೇಶ್ ಮತಯಾಚನೆ ಮಾಡ್ತಿದ್ದಾರೆ.ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಂಸದ ವಾಗ್ದಾಳಿ ನಡೆಸಿದಾರೆ.
ಬಿಜೆಪಿ ಶಾಸಕ ಎಂ ಕೃಷ್ಷಪ್ಪ ಸಾಕಷ್ಟು ಲೂಟಿ ಮಾಡಿದ್ದಾರೆ.ಬಡಜನತೆ ನೆಮ್ಮದಿಯಾಗಿ ಬದುಕುವ ಹಾಗಿಲ್ಲ.ಗ್ಯಾಸ್, ಕರೇಂಟ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಜಾಸ್ತಿ ಮಾಡಿ.ಜನತೆಯನ್ನ ನರಕಕ್ಕೆ ತಳ್ಳಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ವನ್ನು ಮನೆಗೆ ಕಳುಹಿಸಿ.ಬೋಮ್ಮಾಯಿ, ಕೃಷ್ಣಪ್ಪ, ಮೋದಿ ಸರ್ಕಾರಕ್ಕೆ ಹೇಳಿ ಗೋವಿಂದ ,ಎಂದು ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.