Publish Date: Tue, 02 May 2023 (14:11 IST)
Updated Date: Tue, 02 May 2023 (12:39 IST)
ಯಾದಗಿರಿ : ಬಿಜೆಪಿಯಲ್ಲಿ ದೊಡ್ಡ ಕಾಮಿಡಿ ಪೀಸ್ ಅಂದ್ರೆ ಅದು ಸುಧಾಕರ್. ಅವರ ಕ್ಷೇತ್ರ ಬಿಟ್ಟು ಎಲ್ಲಾದರೂ ಅಲ್ಲಾಡಿದ್ದಾರಾ..?, ಬೇರೆ ಕ್ಷೇತ್ರಕ್ಕೆ ಹೋಗಿದ್ದಾರಾ?. ನನ್ನ ಬಗ್ಗೆ ಮಾತಾಡ್ತಾರಲ್ಲ, ನಾನು ಕಾಂಗ್ರೆಸ್ ಪಕ್ಷದಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದೀನಿ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಹೇಳಿದರು.
ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣಕ್ಕೆ ಆಗಮಿಸಿ ಶಹಾಪುರ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ ಪರ ಮತಬೇಟೆ ಮಾಡಿ, ಶಹಾಪುರ ಪಟ್ಟಣದ ಅಂಜುಮೀನ್ ಶಾಲಾ ಮೈದಾನದಲ್ಲಿ ಬಹಿರಂಗ ಸಮಾವೇಶದಲ್ಲಿ ಜಮೀರ್ ಭಾಗಿಯಾದರು. ಈ ವೇಳೆ ಮಾತನಾಡಿ ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ ಅವರು, ಸುಧಾಕರ್ ಅವರು ಒಂದು ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ.
ಮಾತಾಡೋಕೆ ಬರುತ್ತೆ ಅಂತ ಏನು ಬೇಕಾದರೂ ಮಾತನಾಡುವುದಲ್ಲ. ಮಾತಾಡಬೇಕಾದ್ರೆ ಸ್ವಲ್ಪ ಯೋಚನೆ ಮಾಡಿ ಮಾತಾಡಬೇಕಾಗುತ್ತೆ ಎಂದು ಹೇಳಿದರು. ಇದೇ ವೇಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಪ್ರಣಾಳಿಕೆ ಬಿಡುಗಡೆ ಅದು ನಾಮಾಕಾವಸ್ತೆಯಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ತಕ್ಕಂತೆ ಅನುಷ್ಠಾನಗೊಳಿಸಿದ್ದಾರೆ.