Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೋಷಕರಿಗೆ ಸರಕಾರದಿಂದ ಗುಡ್ ನ್ಯೂಸ್

ಪೋಷಕರಿಗೆ ಸರಕಾರದಿಂದ ಗುಡ್ ನ್ಯೂಸ್
ಬೆಂಗಳೂರು , ಶನಿವಾರ, 18 ಮೇ 2019 (14:37 IST)
ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದ  ಪೋಷಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.

ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಪ್ರೀ ನರ್ಸರಿ ತರಗತಿಗಳನ್ನು ಆರಂಭಿಸುವ ಮೂಲಕ ಸರ್ಕಾರಿ ಶಾಲೆಗಳತ್ತ ಪೋಷಕರು ಆಕರ್ಷಿತರಾಗುವಂತೆ ಮಹತ್ತರ ಹೆಜ್ಜೆ ಇಟ್ಟಿದೆ.

ತಮ್ಮ ಮಕ್ಕಳ ಪೂರ್ವಪ್ರಾಥಮಿಕ ಶಿಕ್ಷಣಕ್ಕಾಗಿ ಅದರಲ್ಲೂ ಫ್ರೀ ಕೆ.ಜಿ., ಎಲ್.ಕೆ.ಜಿ, ಯುಕೆಜಿಗಳಿಗಾಗಿ  ಬಹುತೇಕ ಪಾಲಕರು ಖಾಸಗಿ ಶಾಲೆಗಳಲ್ಲಿಯೇ ಹೆಚ್ಚಾಗಿ ಮಕ್ಕಳನ್ನು ದಾಖಲಿಸುತ್ತಿದ್ದರು. ಇದರಿಂದಾಗಿ ಸರ್ಕಾರಿ ಶಾಲೆಗಳತ್ತ ಮಕ್ಕಳ ಆಕರ್ಷಣೆ ಹಾಗೂ ಪೋಷಕರ ಒಲವು ಕಡಿಮೆಯಾಗುತ್ತಿತ್ತು. ಇದೆಲ್ಲವನ್ನು ಮನಗಂಡ ರಾಜ್ಯ ಸರ್ಕಾರ ಆಯ್ದ 4,100 ಅಂಗನವಾಡಿ ಕೇಂದ್ರಗಳನ್ನು ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸಿದ್ಧತೆ ನಡೆಸಿದೆ.

ಈ ಅಂಗನವಾಡಿ ಕೇಂದ್ರಗಳನ್ನು ಬಾಲ ಸ್ನೇಹಿ‌ಕೇಂದ್ರಗಳನ್ನಾಗಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ದಿಟ್ಟ ಕ್ರಮಕೈಗೊಂಡಿದೆ. ಬಾಲಸ್ನೇಹಿ ಕೇಂದ್ರಗಳಲ್ಲಿ ಎಲ್.ಕೆ.ಜಿ, ಯುಕೆಜಿಯಂತಹ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಯೋಜನೆ ರೂಪಿಸಿದೆ. 2019-20 ನೇ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ 276 ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಈ ತರಗತಿಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

2017-18 ರಲ್ಲಿ 176 ಹಾಗೂ ಈ ವರ್ಷ 100  ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲಾಗಿದೆ. ಈ ಪಬ್ಲಿಕ್ ಶಾಲೆಗಳಲ್ಲಿ ಮೊದಲ ಹಂತದ ಪ್ರೀ ನರ್ಸರಿ ಶಾಲಾತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನಲೆ; ಮಂಡ್ಯದಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ