Publish Date: Tue, 24 Oct 2023 (18:00 IST)
Updated Date: Tue, 24 Oct 2023 (17:59 IST)
ಕನಕಪುರ ಬೆಂಗಳೂರಿಗೆ ಸೇರಿಸುವ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಡಿಕೆಶಿ ವಿರುದ್ಧ ಪರಿಷತ್ ಸದಸ್ಯ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.ಡಿಕೆಶಿಗೆ ರಾಮನಗರ ಜಿಲ್ಲೆ ಅಭಿವೃದ್ಧಿ ಆಗೋದು ಇಷ್ಟ ಇಲ್ಲ ಅನ್ಸತ್ತೆ.ರಾಮನಗರ ಜಿಲ್ಲೆಯನ್ನು ಇನ್ನಷ್ಟು ಕ್ಷೀಣ ಮಾಡುವ ಬಗ್ಗೆ ಡಿಕೆಶಿ ಯೋಚಿಸ್ತಿದ್ದಾರೆ.ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಮೂಲಕ ಇನ್ನಷ್ಟು ಶ್ರೀಮಂತಿಕೆ ಹೆಚ್ಚಿಸಿಕೊಳ್ಳುಬವ ಉದ್ದೇಶ ಇರಬೇಕು.ಕನಕಪುರದಲ್ಲಿ ಸಾವಿರಾರು ಎಕರೆ ಜಾಗ ಇದೆ, ಇದರಿಂದ ತಾವು ಮತ್ತು ತನ್ನವರು ಸಮೃದ್ಧಿ ಆಗುವ ದೃಷ್ಟಿಯಿಂದ ಈ ಹೇಳಿಕೆ ಕೊಟ್ಟಿರಬೇಕು.ರಾಮನಗರ ಅಥವಾ ಕನಕಪುರ ಉದ್ಧಾರ ಮಾಡಲು ಡಿಕೆಶಿ ಈ ಹೇಳಿಕೆ ನೀಡಿಲ್ಲ.ಬೆಂಗಳೂರಿಗೆ ಕನಕಪುರ ಸೇರುವುದರಿಂದ ಜನಕ್ಕೆ ಲಾಭ ಆಗುವುದಕ್ಕಿಂತಲೂ ಡಿಕೆಶಿ ಕುಟುಂಬಕ್ಕೆ ಬಹಳ ದೊಡ್ಡ ಲಾಭ ಆಗಲಿದೆ ಎಂದು ರವಿಕುಮಾರ್ ಹೇಳಿದ್ದಾರೆ.