ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಹೀಗಾಗಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಪ್ರವಾಸಿಗರ ಸ್ನೇಹಿ ಹಾಗೂ ಅದ್ದೂರಿ ದಸರಾವನ್ನಾಗಿ ಆಚರಣೆಗೆ ಸಿದ್ದತೆ ನಡೆದಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಂಭ್ರಮದ ಹಾಗೂ ಅದ್ಧೂರಿ ದಸರಾ ಆಚರಣೆಗಾಗಿ ಮೈಸೂರು ಭಾಗದ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಾಗಿದೆ. ಈ ಬಾರಿ ದಸರಾವನ್ನ ಅದ್ದೂರಿಯಾಗಿ ನಡೆಸುತ್ತೇವೆ ಎಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿಗೆ ಮುಂದಿನ ಸೆಪ್ಟೆಂಬರ್ವರೆಗು ಬಿಡಬೇಕಾದ ನೀರು ಬಿಟ್ಟಿದ್ದೇವೆ. ಈ ಬಾರಿಯಂತೂ ತಮಿಳುನಾಡಿಗೆ ನೀರು ಬಿಡುವ ಸಮಸ್ಯೆ ಎದುರಾಗೋದಿಲ್ಲ ಎಂದಿದ್ದಾರೆ.
ಚಾಮುಂಡಿ ದರ್ಶನ ಪಡೆದು, ಬಾಗಿನ ಅರ್ಪಿಸಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸಾಥ್ ನೀಡಿದ್ದರು.