ಇಂದು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಕೃತಜ್ಞತಾ ಸಲ್ಲಿಸಲಿರುವ ಸಚಿವ ಜಿಟಿ ದೇವೇಗೌಡ. ಸಮಾವೇಶಕ್ಕೆ ಇಲವಾಲ ಬಳಿ ಇರೋ ಲಿಂಗದೇವರಕೊಪ್ಪಲಿನ ಮೈದಾನ ಸಿದ್ದವಾಗಿದೆ. ಮಾಜಿ ಸಿಎಂ ಸಿದ್ದು, ವಿರುದ್ದ ಭಾರೀ ಮತಗಳ ಅಂತರದಿಂದ ಗೆದ್ದ ಸಚಿವ ಜಿಟಿ ದೇವೇಗೌಡ.
ಸಮಾವೇಶದ ಜೊತೆ ಜೊತೆಗೆ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟದ ವ್ಯವ್ಯಸ್ಥೆ ಮಾಡಲಾಗಿದೆ.
ಸುಮಾರು 25 ಸಾವಿರ ಮಂದಿಗೆ ಬಾಡೂಟ, ಮತ್ತು 5 ಸಾವಿರ ಮಂದಿಗೆ ಸಸ್ಯಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ.
ಒಂದೊಂದು ಬಾರಿ ಐದು ಸಾವಿರ ಮಂದಿ ಕುಳಿತುಕೊಂಡು ಊಟ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸರಿಸುಮಾರು 11 ಗಂಟೆ ಮೇಲೆ ಆರಂಭವಾಗುವ ಸಮಾವೇಶ ಆರಂಭಗೊಳ್ಳಲಿದೆ.
ಒಂದು ಕಡೆ ಸಮಾವೇಶಕ್ಕೆ ವೇದಿಕೆ ಸಿದ್ದತೆ ನಡೆಸ್ತಿದ್ರೆ, ಮತ್ತೊಂದಕಡೆ ಕೊತ ಕೊತ ಬೇಯುತ್ತಿದೆ ಬಾಡು.
ಇದೇ ಮೈದಾನದಲ್ಲಿ ಕುಮಾರಪರ್ವ ಸಮಾವೇಶ ನಡೆಸಿ, ಪ್ರಚಾರಕ್ಕೆ ದಳಪತಿಗಳು ಧುಮುಕಿದ್ದ ರು. ಹೀಗಾಗಿ ಇದೇ ಮೈದಾನದಲ್ಲಿ ಕ್ಷೇತ್ರದ ಜನರಿಗೆ ಕೃತಜ್ಞತಾ ಸಲ್ಲಿಸಲಿರುವ ದಳಪತಿಗಳು ಬಾಡೂಟದ ವ್ಯವಸ್ಥೆ ಮಾಡುತ್ತಿದ್ದಾರೆ.