Publish Date: Wed, 09 Nov 2022 (11:11 IST)
Updated Date: Wed, 09 Nov 2022 (11:12 IST)
ಶಿವಮೊಗ್ಗ : ಮುಸ್ಲಿಮರ ಮತಕ್ಕಾಗಿ ಹಿಂದೂಗಳಿಗೆ ಅವಹೇಳನ ಮಾಡುತ್ತಿರುವುದು ಅತ್ಯಂತ ನೀಚ ಕೆಲಸ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಂದು ಕಿಡಿ ಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಹಿಂದೂ ಎಂಬ ಪದ ಜಗತ್ತಿನ ತುಂಬ ಹರಡಿಕೊಂಡಿದೆ. ಭಾರತದ ಮುಸ್ಲಿಮರು ಯಾವುದೇ ದೇಶಕ್ಕೆ ಹೋದರೂ, ಹಿಂದೂ ಮುಸ್ಲಿಂ ಎಂದು ಕರೆಯುತ್ತಾರೆ.
ಹೀಗಿರುವಾಗ ಜಾರಕಿಹೊಳಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶನ ಮಾಡಿದೆ ಎಂದರು. ಹಿಂದೂ ಪದ ಅಶ್ಲೀಲ ಅಂತಾ ಜಾರಕಿಹೊಳಿ ಯಾವ ಅರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಜಾರಕಿಹೊಳಿ ಅವರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.