ಬೆಳಗಾವಿ : `ಹಿಂದೂ ಶಬ್ಧ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಭಾಷೆಯ ಪದ, ನಾನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಜಾರಕಿಹೊಳಿ, 8 ನಿಮಿಷ 17 ಸೆಕೆಂಡ್ಗಳ ಸುದೀರ್ಘ ವೀಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ ಒಂದು ಶಬ್ದದ ವಿಷಯ ಮೇಲೆ ಇವತ್ತು ಇಡೀ ರಾಷ್ಟ್ರ ರಾಜ್ಯದ ಎಲ್ಲಾ ಕಡೆ ಚರ್ಚೆ, ವಿಮರ್ಶೆ ಆಗುತ್ತಿದೆ. ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಸ್ಪಷ್ಟೀಕರಣ ಕೊಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.