Webdunia - Bharat's app for daily news and videos

Install App

ವಿವಾದದಿಂದ ಅತಂತ್ರರಾದ ಮುಸ್ಲಿಂ ವ್ಯಾಪಾರಿಗಳು

Webdunia
ಶನಿವಾರ, 9 ಏಪ್ರಿಲ್ 2022 (20:13 IST)
ರಾಜ್ಯರಾಜಧಾನಿಯಲ್ಲಿ ಮುಸ್ಲಿಂಮರಿಗೆ ಇನ್ನಿಲ್ಲದ ಸಂಕಷ್ಟ ಶುರುವಾಗಿದೆ. ನಿತ್ಯ ಒಂದಲ್ಲ ಒಂದು ಸ್ವರೂಪ ಪಡೆಯುತ್ತಿರುವ ಧರ್ಮ ದಂಗಲ್ ನಿಂದ ಮುಸ್ಲಿಂರು ಹೈರಾಣಗಿ ಹೋಗಿದ್ದಾರೆ. ಈಗ ಶುರುವಾದ ವಿವಾದಗಳಿಂದ ಮುಸ್ಲಿಂ ಅಂಗಡಿಗಳಿಗೆ ಹಿಂದೂಗಳು ಹೋಗದಂತಾಗಿದೆ. ಹೀಗಾಗಿ ನಯಾಪೈಸೆ ವ್ಯಾಪಾರ ಇಲ್ಲದೇ ಮುಸ್ಲಿಂ ರು ಪಾರದಾಟ ನಡೆಸ್ತಿದ್ದಾರೆ.ಹಿಜಾಬ್ ವಿವಾದ ಶುರುವಾದಗಲಿಂದ ಮುಸ್ಲಿಂ ಸಮುದಾಯಕ್ಕೆ ತುಂಬ ಹೊಡೆತಬಿದ್ದಿದೆ. ಒಂದಾದ ನಂತರ ಮತ್ತೊಂದರಂತೆ ಶುರುವಾಗ್ತಿರುವ ವಿವಾದದಿಂದ ಮುಸ್ಲಿಂ ವ್ಯಾಪಾರಿಗಳು ಬೇಸೆತ್ತು ಹೋಗಿದ್ದಾರೆ. ಹಿಜಾಬ್ ಯಿಂದ ಶುರುವಾದ ವಿವಾದ ಹಲಾಲ್ ಕಟ್ ಆಯ್ತು, ಮ್ಯಾಂಗೋ ವಾರ್ ಆಯ್ತು. ಹೀಗೆ ಹಲವು ಬಗೆಯ ವಿವಾದಗಳಿಗೆ ಮುಸ್ಲಿಂ ವ್ಯಾಪಾರಿಗಳು ತುತ್ತಾಗಿದ್ದಾರೆ. ಇನ್ನು ಇತ್ತೀಚಿಗೆ ಹಿಂದೂ ಸಂಘಟನೆಗಳಿಂದ ಮುಸ್ಲಿಂರು ಬೆಳೆದ ಪಾದಾರ್ಥಗಳು ಸೇರಿದಂತೆ ಯಾವುದನ್ನ ಮುಸ್ಲಿಂರ ಬಳಿ ತೆಗೆದುಕೊಳ್ಳದಂತೆ ಅಭಿಯಾನ ಮಾಡಿದ್ರು. ಆಗಲಿಂದ ಮುಸ್ಲಿಂ ವ್ಯಾಪಾರಿಗಳು ಅತಂತ್ರರಾಗಿ ಹೋದ್ರು.
 
ಮುಸ್ಲಿಂ ವ್ಯಾಪಾರಿಗಳು ಆಷ್ಟೋ ? ಇಷ್ಟೋ ? ವ್ಯಾಪಾರ ಮಾಡಿಕೊಂಡು ತಮ್ಮ  ಜೀವನ ಸಾಗಿಸ್ತಿದ್ರು.  ಆದ್ರೆ ಈಗ ಆಗುವ ವ್ಯಾಪಾರಕ್ಕೂ ಕಾಲಕ್ಕಿದ್ರು. ಹೇಗೋ ಕೂಲಿನಾಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ತಿದ್ದ ಮುಸ್ಲಿಂ ವ್ಯಾಪಾರಿಗಳ ಹೊಟ್ಟೆ ಮೇಲೆ ಒಡೆದಂತಾಗಿದೆ. ಈಗ ನಯಾಪೈಸೆ ಬ್ಯುಸಿನೆಸ್ ಇಲ್ಲದೇ ವ್ಯಾಪಾರಿಗಳು ಬೀದಿಗೆ ಬೀಳುವ ಪರಿಸ್ಥಿತಿಗೆ ತಲುಪಿದ್ದಾರೆ.ಮೊದಲಾಗ್ತಿದ್ದ ವ್ಯಾಪಾರ ಈಗ ಆಗ್ತಿಲ್ಲ. ಹಿಂದೂಗಳು ಮುಸ್ಲಿಂ ರ ಬಳ್ಳಿ ಹೋಗಿ ಏನನ್ನು ಕೊಂಡುಕೊಳ್ತಿಲ್ಲ. ಏನಾದ್ರು ತೆಗೆದಕೊಳ್ಳಬೇಕಾದ್ರು ಹಿಂದೆ ಮುಂದೆ ನೋಡ್ತಿದ್ದಾರೆ. ಆಗುವ ವ್ಯಾಪಾರದಲ್ಲಿ ಈಗ ಶೇ 50 ರಷ್ಟು ಮಾತ್ರ ಆಗ್ತಿರುವುದು . ಹೀಗಾಗಿ ಮುಸ್ಲಿಂ ಸಮುದಾಯದವರು ರಾಜಕೀಯ ಕಿಡಿಗೇಡೆಗಳು ಮಾಡಿರುವ ಕುತಂತ್ರಕ್ಕೆ ನಾವು ಬಲಿಯಾಗಿದ್ದೇವೆ ಎಂದು ಅಸಾಮಾಧಾನ ಹೊರಹಾಕ್ತಿದ್ದಾರೆ.ಶಿವಾಜಿನಗರ ಸೇರಿದಂತೆ ನಗರದ ಬಹುತೇಕ ಕಡೆ ವ್ಯಾಪಾರ ಮಾಡುವವರಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚು. ಹಿಂದೆ ಮುಸ್ಲಿಂ ಅಂಗಡಿಗಳಿಗೆ ಹೋಗಿ ಹಿಂದೂಗಳು ತಮ್ಮಗೆ ಬೇಕಾದದನ್ನ ಕೊಂಡುಕೊಳ್ತಿದ್ರು. ಆದ್ರೆ ಈಗ ಕೆಲ ಹೊಂದೂಗಳು ಅವರ ಅಂಗಡಿಗಳಲ್ಲಿ ಕೊಳ್ಳುವುದಕ್ಕೆ ಹಿಂದೆ-ಮುಂದೆ ನೋಡ್ತಿದ್ದಾರೆ. ಹೀಗಾಗಿ ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರವೇ ಇಲ್ಲದಂತಾಗಿದೆ. ಇದ್ದರಿಂದ ನೊಂದ ಮುಸ್ಲಿಂರು ದಿಕ್ಕು ತೋಚದಂತಾಗಿದ್ದಾರೆ. ವ್ಯಾಪಾರ ಇಲ್ಲದೇ ಬದುಕು ಸಾಗಿಸಲು ಆಗ್ತಿಲ್ಲ ಅಂತಾ ಕಣ್ಣೀರುಡುತ್ತಾ ಮುಸ್ಲಿಂ ವ್ಯಾಪಾರಿಗಳು ಆಕ್ರೋಶ ಹೊರಹಾಕ್ತಿದ್ದಾರೆ.ಶುರುವಾದ ಒಂದು ವಿವಾದ ಹಲವು ಸಮಸ್ಯೆಗಳಿಗೆ ಹೀಡುಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments