Publish Date: Thu, 07 Apr 2022 (17:58 IST)
Updated Date: Thu, 07 Apr 2022 (18:00 IST)
ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಎಲ್ಲವೂ ಅತಿರೇಕವಾಗಿದ್ದು, ಮತಗಳ ಆಸೆಗಾಗಿ ಒಂದಾದ ಮೇಲೊಂದು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. M.B ಪಾಟೀಲ್ ಹೇಳಿಕೆ ನೀಡಿದ್ದಾರೆ. ಯುವಕನ ಹತ್ಯೆ ವಿಚಾರವಾಗಿ ಮಾತಾಡಿದ ಅವರು, ಹಿಜಾಬ್, ಕಾಶ್ಮೀರಿ ಫೈಲ್ಸ್, ದೇವಸ್ಥಾನ ಜಾತ್ರೆ ನಿರ್ಬಂಧ, ಹಲಾಲ್, ಅಜಾನ್ ವಿಚಾರವಾಗಿ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ಇದು ಮುಂದೆ ಅವರಿಗೇ ತಿರುಗುಬಾಣವಾಗಲಿದೆ. ಈ ಕಾರಣದಿಂದ ಕೈಗಾರಿಕೆಗಳು, ಕೈಗಾರಿಕಾ ಉದ್ಯಮಿಗಳು ಇಲ್ಲಿಗೆ ಬರಲು ಹಿಂಜರಿಯುತ್ತಾರೆ. ಇದರಿಂದ ರಾಜ್ಯವೂ ಸಹ ಅಭಿವೃದ್ಧಿಯತ್ತ ಸಾಗುತ್ತಿಲ್ಲ ಎಂದಿದ್ದಾರೆ.
geetha
Publish Date: Thu, 07 Apr 2022 (17:58 IST)
Updated Date: Thu, 07 Apr 2022 (18:00 IST)