ಅದು ಸರಿಸುಮಾರು ನಾಲ್ಕನೂರು ವರ್ಷಗಳ ಇತಿಹಾಸವಿರುವ ದೇವಸ್ಥಾನ. ನಿಧಿಗಳ್ಳರ ಕಣ್ಣು ಈಗ ಈ ದೇವಾಲಯದ ಮೇಲೆ ಬಿದ್ದಿದೆ. ಹೀಗಾಗಿ ನಿಧಿ ಆಸೆಗೆ ಕನ್ನ ಕೊರೆದಿರುವ ದುರುಳರು ಮೂರ್ತಿ ಭಗ್ನಗೊಳಿಸಿದ್ದಾರೆ.
ನಾನೂರು ವರ್ಷಗಳ ಇತಿಹಾಸವಿರುವ ಕಲ್ಲೇಶ್ವರ ದೇವಸ್ಥಾನವನ್ನು ನಿಧಿ ಆಸೆಗಾಗಿ ಭಗ್ನ ಗೋಳಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಡೆದಿದೆ. ನಿಧಿಯ ಆಸೆಗೆ ಕಲ್ಲೇಶ್ವರ ದೇವಸ್ಥಾನಕ್ಕೆ ನುಗ್ಗಿ ದೇವರ ವಿಗ್ರಹವನ್ನು ಭಗ್ನ ಮಾಡಿದ್ದಾರೆ. ಈ ಘಟನೆ ನಡೆದ ಹಿನ್ನೆಲೆಯಲ್ಲಿ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ. ಘಟನಾ ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಪೊಲೀಸರ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಧಿಗಾಗಿ ಕಣ್ಣ ಹಾಕಿದ್ದಲ್ಲದೇ ದೇವಾಲಯಕ್ಕೆ ಹಾನಿಮಾಡಿರುವ ದುರುಳರಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಗ್ರಾಮಸ್ಥರು, ಭಕ್ತರು ಒತ್ತಾಯಿಸಿದ್ದಾರೆ.