ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ ಕೆಲ ಕಾಲ ರಾಡರ್ ಸಂಪರ್ಕಕ್ಕೆ ಸಿಗದೇ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಬ್ರಿಕ್ಸ್ ಶೃಂಗ ಮತ್ತು ಐಬಿಎಸ್ ಎ ಸಭೆಯಲ್ಲಿ ಪಾಲ್ಗೊಳ್ಳಲು ಜೊಹಾನ್ಸ್ ಬರ್ಗ್ ಗೆ ತೆರಳಲು ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸುಮಾರು 14 ನಿಮಿಷಗಳ ಕಾಲ ವಿಮಾನ ರಾಡರ್ ಸಂಪರ್ಕಕ್ಕೆ ಸಿಗದೇ ಆತಂಕ ಸೃಷ್ಟಿಸಿತು.
ಅವರು ಪ್ರಯಾಣಿಸುತ್ತಿದ್ದ ವಿಮಾನ ಕಡಿಮೆ ಇಂಧನ ಸಾಮರ್ಥ್ಯವಿರುವುದಾಗಿದ್ದು, ಇದು ಮಾರ್ಗ ಮಧ್ಯೆ ಇಳಿದು ಇಂಧನ ತುಂಬಿಸಿಕೊಳ್ಳಬೇಕಿತ್ತು. ಅದೇ ರೀತಿ ತಿರುವನಂತಪುರಂನಲ್ಲಿ ಇಳಿದು ಮಾರಿಷಸ್ ಮಾರ್ಗವಾಗಿ ತೆರಳುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ರಾಡರ್ ಸಂಪರ್ಕಕ್ಕೆ ಸಿಗದೇ ಇದ್ದಾಗ ಅಧಿಕಾರಿಗಳು ಆತಂಕಕ್ಕೊಳಗಾದರು. ಕೊನೆಗೆ 14 ನಿಮಿಷದ ನಂತರ ಮತ್ತೆ ವಿಮಾನ ಸಾಂಕೇತಿಕವಾಗಿ ಎಟಿಸಿಯ ಪರದೆ ಮೇಲೆ ಮೂಡಿಬಂದಾಗ ಅಧಿಕಾರಿಗಳು ನಿರಾಳರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.