Publish Date: Wed, 17 Aug 2022 (21:50 IST)
Updated Date: Wed, 17 Aug 2022 (21:53 IST)
ಪ್ಲ್ಯಾನ್ ಹಾಕಿ, ಪತ್ನಿಯ ಕೊಲೆ ಮಾಡಿ ಬಳಿಕ ಮಡಿವಾಳ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾನೆ. ಆದರೆ ಅನುಮಾನಗೊಂಡ ಪೊಲೀಸರು ಆತನನ್ನೇ ವಿಚಾರಣೆ ನಡೆಸಿದಾಗ ಖತರ್ನಾಕ್ ಪ್ಲ್ಯಾನ್ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಬೆಂಗಳೂರಿನ ಮಡಿವಾಳದ ಪೃಥ್ವಿರಾಜ್, ಜ್ಯೋತಿಯನ್ನು 8 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಮದುವೆಯ ಬಳಿಕ ನಿರಂತರವಾಗಿ ಜಗಳವಾಡುತ್ತಿದ್ದರಿಂದ ಪೃಥ್ವಿರಾಜ್ ಟಾರ್ಚರ್ ತಡೆಯಲಾಗದೇ ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಮೊದಲೇ ಯೋಜಿಸಿದ ಪ್ಲ್ಯಾನ್‌ನಂತೆ ಪೃಥ್ವಿರಾಜ್ ತನ್ನ ಹಾಗೂ ಪತ್ನಿಯ ಮೊಬೈಲ್ ಫೋನ್‌ಗಳನ್ನು ಮನೆಯಲ್ಲಿಯೇ ಇರಿಸಿ ಟ್ರಿಪ್‌ಗೆ ಕರೆದುಕೊಂಡು ಹೋಗಿದ್ದ. ಜ್ಯೋತಿಯನ್ನು ಸಕಲೇಶಪುರದ ಗುಂಡ್ಯ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯ ವೇಲ್‌ನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದ. ಬಳಿಕ ಆಕೆಯ ಶವವನ್ನು ಅಲ್ಲಿಯೇ ಪೊದೆಯೊಂದರಲ್ಲಿ ಎಸೆದಿದ್ದ. ಪೃಥ್ವಿರಾಜ್‌ನ ಬಾಯಿ ಬಿಡಿಸಿದ ಪೊಲೀಸರು ಕೊಲೆ ಹಿಂದಿನ ರಹಸ್ಯವನ್ನೆಲ್ಲಾ ರಿವೀಲ್ ಮಾಡಿದ್ದಾನೆ.