ಮತದಾರರ ಮಾಹಿತಿ ಗೋಲ್ ಮಾಲ್ ಗೆ ಸಂಬಂಧಿಸಿದಂತೆ ಸಚಿವ ಮುನಿರತ್ನ ಸುದ್ದಿಗೋಷ್ಠಿ ನಡೆಸಿದ್ದಾರೆ.ಎಲ್ಲಿ ಮತದಾರರ ಪಟ್ಟಿ ಡಿಲೀಟ್ ಆಗಿದೆ ಅಂತಾ ಆರೋಪ ಮಾಡ್ತಾರೆ.ಡಿ.ಕೆ. ಸುರೇಶ್ ಸರಿಯಾದ ಮಾಹಿತಿ ತನ್ನಿ.ನಿಮ್ಮ ಜೊತೆ ನಾನು ಇದ್ದಾಗ ಯಾವುದೂ ಸೇರ್ಪಡೆ,ಡಿಲೀಟ್ ಆಗಿರಲಿಲ್ಲ.ನಿಮ್ಮ ಜೊತೆ ಇದ್ದಾಗ ನಾನು ಬಹಳ ಪವಿತ್ರವಾಗಿದ್ದೆ, ಈಗ ಪವಿತ್ರ ಇಲ್ಲದಾಗಿದೆ.ಸಂಸದ ಸ್ಥಾನಕ್ಕೆ ಘನತೆ ತರುವಂತಹ ಮಾತಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ ಮುನಿರತ್ನ ಅಂತಹ ಕೀಳು ರಾಜಕಾರಣ ಮಾಡಲ್ಲ.ಅವರಿಗೆ ಅಂತಹ ರಾಜಕಾರಣ ಬೇಕೇನೋ.ಮೊದಲು ಡಿ.ಕೆ. ಸುರೇಶ ಕ್ಷೇತ್ರಕ್ಕೆ ಕೊಟ್ಟಿರುವ ಕೆಲಸದ ಮಾಹಿತಿ ಕೊಡಲಿ.ಮತದಾರರ ಪಟ್ಟಿ ಡಿಲೀಟ್ ಮಾಡುವಷ್ಟು ಕೀಳು ಮಟ್ಟ ನನ್ನದಲ್ಲ.ತೇಜೋವಧೆ ಮಾಡಿ ಗೆಲ್ತೀನಿ ಅನ್ನೋದನ್ನು ಬಿಟ್ಟುಬಿಡಿ.ಬನ್ನಿ ಜನರ ಮುಂದೆ ಹೋಗೋಣ.ಸೇರ್ಪಡೆ,ಡಿಲೀಟ್ ನಿಮಗೆ ರೂಡಿಯಾಗಿದೆ ಆ ಕೆಲಸ ನನ್ನದಲ್ಲ.ನಿಮಗೆ ಅಂತಹ ಅಭ್ಯಾಸಗಳಿವೆ.ಎಂಪಿ ಅಂತಾ ಬಾಯಿಗೆ ಬಂದಂತೆ ಮಾತಾಡೋದಲ್ಲ.ಸಣ್ಣತನದ ರಾಜಕೀಯ ಬಿಟ್ಟು ಜೀವನ ಮಾಡಿ.ಮಲ್ಲೇಶ್ವರಂನಲ್ಲಿ ನನ್ನದು ಐದನೇ ತಲೆಮಾರು,ಸ್ವಲ್ಪ ಗೊತ್ತಿರಲಿ.ನಿಮಗೆ ಗೊತ್ತಿರದಿದ್ದರೆ ನಿಮ್ಮ ಅಣ್ಣನ ಕೇಳಿ.ನಿಮಗಿಂತ ಮೊದಲೇ ಅವರು ಬೆಂಗಳೂರಿಗೆ ಬಂದಿದ್ದು.ನಾನು ಮಲ್ಲೇಶ್ವರದಲ್ಲೇ ಹುಟ್ಟಿದ್ದು.ಚುನಾವಣೆಗೆ ನಾಮಪತ್ರ ಸಲ್ಲಿಸಿ ನಾನು ಕ್ಷೇತ್ರದಲ್ಲಿ ಓಡಾಡಲ್ಲ,ಮತಯಾಚನೆ ಮಾಡಲ್ಲ, ನೀವು ಅದೇ ರೀತಿ ಮಾಡಿ ಜನರ ತೀರ್ಮಾನಕ್ಕೆ ಬಿಡೋಣ ಎಂದು ಮುನಿರತ್ನ ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.