ಅದು ಕಳೆದ ಭಾನುವಾರದ ರಾತ್ರಿ ಹತ್ತು ಗಂಟೆ ಸಮಯ.. ಕನ್ನಡ ಬಾವುಟ ಕೈಯಲ್ಲಿ ಹಿಡಿದ ವ್ಯಕ್ತಿಯೊಬ್ಬ ಸಾರ್ವಜನಿಕರ ಮುಂದೆಯೇ ಬಾವುಟಕ್ಕೆ ಬೆಂಕಿ ಹಚ್ಚೋಕೆ ಶುರುಮಾಡಿದ್ದ.. ತಕ್ಷಣ ಅಲರ್ಟ್ ಆದ ಜನರು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ರು.ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಪರಂಗಿ ಪಾಳ್ಯ.. ಹೀಗೆ ಪೊಲೀಸರ ಮುಂದೆ ಸೈಲೆಂಟ್ ಆಗಿ ನಿಂತಿರುವ ಈ ವ್ಯಕ್ತಿಯೇ ನೋಡಿ ಕನ್ನಡ ಬಾವುಟಕ್ಕೆ ಬೆಂಕಿ ಹಾಕಲು ಯತ್ನಿಸಿ ಸಿಕ್ಕಿಬಿದ್ದಿರುವ ಕನ್ನಡ ದ್ರೋಹಿ.. ಹೆಸರು ಅಮೃತೇಶ್.. ಉತ್ತರ ಪ್ರದೇಶದ ವಾರಣಾಸಿ ಮೂಲದನವಾಗಿರುವ ಅಮೃತೇಶ್ , ದೆಹಲಿಯ ಐಐಟಿಯಲ್ಲಿ ಎಂಜಿನಿಯರಿಂಗ್ ಓದಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿ ಯಾಗಿ ಕೆಲಸ ಮಾಡ್ತಿದ್ದ.. ಕರೋನಾ ಹೆಚ್ಚಾದ ಕಾರಣದಿಂದ ೨೦೨೦ ರಲ್ಲಿ ಲಾಕ್ ಡೌನ್ ಬೆಂಗಳೂರಿನಲ್ಲಿ ಲಾಕ್ ಡೌನ್ ಹೇರಲಾಗಿತ್ತು.. ಯಾರಿಗೂ ಎಲ್ಲೂ ಓಡಾಟಕ್ಕೆ ಅವಕಾಶ ಇರಲಿಲ್ಲ.. ಎಲ್ಲ ಕಡೆ ಪೊಲೀಸರ ನಿಯೋಜನೆ ಮಾಡಲಾಗಿತ್ತು.
ಲಾಕ್ ಡೌನ್ ಲೆಕ್ಕಿಸಿದ ಟೆಕ್ಕಿ ಅಮೃತೇಶ್, ನಾನು ಉತ್ತರ ಪ್ರದೇಶಕ್ಕೆ ಹೋಗಬೇಕು ಅಂತಾ ಲೆಗೇಜ್ ಹಿಡಿದು ರಸ್ತೆಗೆ ಬಂದಿದ್ದ.. ಅಮೃತೇಶ್ ನ ನೋಡಿದ ಪೊಲೀಸರು, ರಸ್ತೆಯಲ್ಲೇ ಲಾಠಿಯಿಂದ ನಾಲ್ಕು ಬಿಟ್ಟು ಮನೆಗೆ ಕಳುಹಿಸಿದ್ರು.. ಇದರಿಂದ ತೀವ್ರ ಅವಮಾನಕ್ಕೆ ಒಳಗಾಗಿ ಅಂದಿನಿಂದ ಬೆಂಗಳೂರು ಪೊಲೀಸರು, ಕರ್ನಾಟಕ ಕನ್ನಡ ಅಂದರೆ ಊರಿದು ಬಿಳ್ತಿದ್ದ.. ಕಳೆದ ಭಾನುವಾರ ರಾತ್ರಿ ಎಣ್ಣೆ ಮತ್ತಲ್ಲಿದ್ದ ಟೆಕ್ಕಿ ಅಮೃತೇಶ್ ಗೆ ಕನ್ನಡ ಬಾವುಟವೊಂದು ಕಾಣಿಸಿತ್ತು.. ತಕ್ಷಣ ಕೈಯಲ್ಲಿ ಹಿಡಿದವನೇ, ಪರಂಗಿ ಪಾಳ್ಯದ ಬೇಕರಿಯೊಂದರ ಬಳಿ ಬಂದು ಏಕಾಏಕಿ ಬೆಂಕಿ ಹಚ್ಚಿದ್ದ.. ಸ್ಥಳದಲ್ಲಿದ್ದ ಸಾರ್ವಜನಿಕರು, ಸುಟ್ಟ ಬಾವುಟವನ್ನು ರಕ್ಷಣೆ ಮಾಡಿ ಅಮೃತೇಶ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ರು.. ಪೊಲೀಸರು ,ವಿಚಾರಣೆ ನಡೆಸಿದ ವೇಳೆ ಲಾಕ್ ಡೌನ್ ನಲ್ಲಿ ತಿಂದ ಲಾಠಿ ಏಟು, ಪೊಲೀಸರ ಮೇಲಿನ ಕೋಪಕ್ಕೆ ಈ ರೀತಿ ಮಾಡಿದ್ದಾಗಿ ತಪ್ಪೋಪ್ಪಿಗೆ ಹೇಳಿಕೆ ನೀಡಿದ್ದಾನೆ.